Agriculture and Rural Development

ಭಾರತದ ಬಹುಪಾಲು ಮನೆಗಳಲ್ಲಿ ಮನೆಯವರೆಲ್ಲರ ಮನಗೆದ್ದ ಪಾನೀಯ ಚಹಾ. ಸಸ್ಯದ ಎಳೆ ಎಲೆಗಳನ್ನು ನಾಜೂಕಾಗಿ ಸಂಸ್ಕರಿಸಿ ಉತ್ಪಾದಿಸುವ ಚಹಾ ಹುಡಿಯಿಂದ ತಯಾರಿಸುವ ಪಾನೀಯ ಇದು. ಈಗ ನಮ್ಮ ದೇಶ ಉತ್ಪಾದಿಸುವ ಚಹಾ ಹುಡಿಯ ಪರಿಮಾಣ ಎಷ್ಟು? ವರುಷಕ್ಕೆ 9 ಲಕ್ಷ ಟನ್! ಆದರೆ, ಈ ಸಸ್ಯದ ಮೂಲ ಭಾರತ ಅಲ್ಲ.

ಚಹಾಕ್ಕಿಂತ ಮುಂಚೆ ಭಾರತದಲ್ಲಿ ಬಳಕೆಯಲ್ಲಿದ್ದ ಚೇತೋಹಾರಿ ಪಾನೀಯ ಕಾಫಿ. ಹದಿನಾರನೆಯ ಶತಮಾನದಲ್ಲಿ ಭಾರತಕ್ಕೆ ತರಲಾದ ಕಾಫಿ, ನಾಲ್ಕು ಶತಮಾನಗಳ ಕಾಲ ಜನಪ್ರಿಯ ಪಾನೀಯವಾಗಿ ಮುಂದುವರಿಯಿತು. ಅನಂತರ, ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಬ್ರಿಟಿಷರು ಚೇತೋಹಾರಿ ಪಾನೀಯವಾಗಿ ಚಹಾವನ್ನು ಭಾರತದಲ್ಲಿ ಪ್ರಚುರಪಡಿಸಿದರು. (ಅದಕ್ಕಿಂತ ಮುಂಚೆ, ಅಸ್ಸಾಮಿನ ಕೆಲವು ಬುಡಕಟ್ಟಿನ ಜನರು ಚಹಾ ಸೇವಿಸುತ್ತಿದ್ದ ದಾಖಲೆಗಳಿವೆ.) 

ಡಾಕ್ಟರ್ ಕ್ಯಾಂಪ್‌ಬೆಲ್ ಎಂಬ ಸರಕಾರಿ ಸರ್ಜನ್ ವರ್ಗಾವಣೆಯಾಗಿ 1841ರಲ್ಲಿ ಕಾಠ್ಮಂಡುವಿನಿಂದ ಡಾರ್ಜಿಲಿಂಗಿಗೆ ಬಂದ. ಕಳ್ಳಸಾಗಣೆ ಮೂಲಕ ಚೀನಾದಿಂದ ಚಹಾ ಬೀಜಗಳನ್ನು ತರಿಸಲು ಆತ ಗುಪ್ತ ಯೋಜನೆ ರೂಪಿಸಿ, ಅಂತೂ ಕೆಲವು ಬೀಜಗಳನ್ನು “ಕದ್ದು" ತರಿಸಿದ. ಅವನ್ನು ಡಾರ್ಜಿಲಿಂಗಿನ ಬೆಟ್ಟಗಳಲ್ಲಿ ಬೆಳೆಸಿದ. ಹೀಗೆ ಚಹಾ ಉತ್ಪಾದನೆಯಲ್ಲಿ ಚೀನಾದ ಏಕಸ್ವಾಮಿತ್ವವನ್ನು ತೊಡೆದು ಹಾಕಲಿಕ್ಕಾಗಿ ಬ್ರಿಟಿಷರು ಹೂಡಿದ ತಂತ್ರ ಕೊನೆಗೂ ಯಶಸ್ವಿಯಾಯಿತು. 

ಬ್ರಿಟಿಷರು ಭಾರತದಲ್ಲಿ ತಮಿಳ್ನಾಡು, ಅಸ್ಸಾಮ್ ಮತ್ತು ಇತರೆಡೆಗಳಲ್ಲಿ ಚಹಾ ತೋಟಗಳನ್ನು ಬೆಳೆಸಿದರು. ಆದರೆ, ಆ ಪ್ರದೇಶಗಳ ಸಮುದಾಯಗಳು ಚಹಾವನ್ನು ಪಾನೀಯವಾಗಿ ಸ್ವೀಕರಿಸಲಿಲ್ಲ. ಇದು, ಬ್ರಿಟಿಷ್ ಮಹಿಳೆಯರ ಮೆಚ್ಚಿನ ಪಾನೀಯವಾಗಿತ್ತು. ಪ್ರತಿ ದಿನ ಸಂಜೆ, “ಚಹಾ ಕೂಟ”ಗಳನ್ನು ಏರ್ಪಡಿಸುವುದು ಅವರ ಖಯಾಲಿಯಾಗಿತ್ತು. ಆದರೆ, 1930ರ ಆರ್ಥಿಕ ಕುಸಿತದಿಂದಾಗಿ, ಬಹುಪಾಲು ಬ್ರಿಟಿಷ್ ಕುಟುಂಬಗಳಿಗೆ ಚಹಾಹುಡಿ ಖರೀದಿ ಮುಂದುವರಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ, ಬ್ರಿಟಿಷರಿಗೆ ಶೇಖರಿಸಿಟ್ಟ ಚಹಾಹುಡಿಯ ದಾಸ್ತಾನನ್ನು ವಿಲೇವಾರಿ ಮಾಡಬೇಕಾದ ಅನಿವಾರ್ಯತೆ ಉಂಟಾಯಿತು. ಆದ್ದರಿಂದ ಬ್ರಿಟಿಷರು ಭಾರತದ ಮಾರುಕಟ್ಟೆಗೆ ಚಹಾಹುಡಿ ಬಿಡುಗಡೆ ಮಾಡಬೇಕಾಯಿತು. 

“ಕೃಷಿ ಮಾಡಿ, ನಿಮ್ಮ ಆಹಾರ ನೀವೇ ಬೆಳೆಸಿ” ಎಂದಾಗ, ಹಲವರು “ಅದೆಲ್ಲ ಆಗೋದಿಲ್ಲ" ಅಂತಾರೆ. ಯಾಕೆ? ಎಂದು ಪ್ರಶ್ನಿಸಿದರೆ, ಅವರು ಪಟ್ಟಿ ಮಾಡುವ ಕಾರಣಗಳು: ಜಮೀನು ಇಲ್ಲ; ಮಣ್ಣು ಚೆನ್ನಾಗಿಲ್ಲ; ಗೊಬ್ಬರ ಇಲ್ಲ; ದೈಹಿಕ ಕೆಲಸ ಮಾಡಿ ಅಭ್ಯಾಸವಿಲ್ಲ; ಕೆಲಸಕ್ಕೆ ಜನ ಸಿಗೋದಿಲ್ಲ; ಹೆಚ್ಚುವರಿ ಫಸಲಿಗೆ ಮಾರುಕಟ್ಟೆ ಇಲ್ಲ; ಸಮಯವಿಲ್ಲ ಇತ್ಯಾದಿ.

ಈ ಎಲ್ಲ ಕಾರಣಗಳನ್ನು ಮೆಟ್ಟಿ ನಿಂತು ಕೃಷಿ ಮಾಡುತ್ತಿದ್ದಾರೆ ಶ್ರೀಧರ ಕಾರಂತ್. ವಯಸ್ಸು 60 ದಾಟಿದ್ದರೂ ಲವಲವಿಕೆಯಿಂದ ತರಕಾರಿಗಳನ್ನು ವರುಷವಿಡೀ ಬೆಳೆಸುತ್ತಿದ್ದಾರೆ! ಮಳೆಗಾಲದಲ್ಲಿ ಸಸಿ ನಾಟಿ ಮಾಡಿ ಭತ್ತವನ್ನೂ ಬೆಳೆಸುತ್ತಿದ್ದಾರೆ!

ಶ್ರೀಧರ ಕಾರಂತರ ಬಳಿ "ಜಮೀನು ಇಲ್ಲ” ಎಂಬ ನೆವನವಿಲ್ಲ. ಕೇರಳದ ಉತ್ತರದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕಣ್ವತೀರ್ಥ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅವರ ವಾಸ. (ಮಂಗಳೂರಿನಿಂದ ಕಣ್ವತೀರ್ಥಕ್ಕೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನದಲ್ಲಿ ಅರ್ಧ ಗಂಟೆಯ ಪ್ರಯಾಣ.) ಅಲ್ಲೇ ಸುತ್ತಮುತ್ತಲು ಐದು ಜನರ ತಲಾ ಸುಮಾರು ಒಂದೆಕೆರೆ ಜಮೀನು ಲೀಸಿಗೆ ಪಡೆದು ತರಕಾರಿ ಕೃಷಿ: ಟೊಮೆಟೋ, ಎಲೆಕೋಸು, ಅಲಸಂಡೆ, ಕೆಂಪು ಬೆಂಡೆಕಾಯಿ, ಹಸುರು ಬೆಂಡೆಕಾಯಿ, ಬದನೆ, ಸೌತೆ, ಮುಳ್ಳುಸೌತೆ, ಚೀನಿಕಾಯಿ, ಕುಂಬಳಕಾಯಿ, ಇಬ್ಬಡ್ಲ, ಹರಿವೆ, ಗೆಣಸು, ಮೆಣಸು. 

ಮಣ್ಣು ಚೆನ್ನಾಗಿಲ್ಲ ಎಂಬ ನೆವನವೂ ಕಾರಂತರ ಬಳಿ ಇಲ್ಲ. ಅವರು ತರಕಾರಿ ಬೆಳೆಸುವುದು ಸಮುದ್ರದ ಹತ್ತಿರದ ಜಮೀನುಗಳಲ್ಲಿ. ಅಲ್ಲಿನದು ಮರಳುಮಣ್ಣು ಅಂದರೆ ನಿಸ್ಸಾರವಾದ ಮಣ್ಣು. ಅಂತಹ ಫಲವತ್ತತೆಯೇ ಇಲ್ಲದ ಜಮೀನಿನಲ್ಲಿ ಬಾವಿಯಿಂದ ನೀರು ಹಾಯಿಸಿ, ಉತ್ತಮ ತರಕಾರಿ ಫಸಲು ಪಡೆಯುತ್ತಿರುವ ಶ್ರೀಧರ ಕಾರಂತರದು ಸಾಹಸವೇ ಸೈ. ಒಬ್ಬರು ಭೂಮಾಲೀಕರಿಗೆ ಕಾರಂತರು ವರುಷಕ್ಕೆ ಪಾವತಿಸುವ ಜಮೀನಿನ ಬಾಡಿಗೆ ರೂ.25,000. ಉಳಿದ ನಾಲ್ವರಿಗೆ ಪಾವತಿಸುವ ಜಮೀನಿನ ಬಾಡಿಗೆ ವರುಷಕ್ಕೆ ತಲಾ ರೂ.5,000.

ಕೇರಳದ ಅಜಯ್ ಗೋಪಿನಾಥ್ (ಫೋಟೋ) ತಮ್ಮ ಮನೆಯ 100 ಚದರಡಿ ಕೋಣೆಯಲ್ಲಿ ಷೆಲ್ಪ್‌-ಗಳಲ್ಲಿಟ್ಟ ಪ್ಲಾಸ್ಟಿಕ್ ಟ್ರೇಗಳಲ್ಲಿ ಪುಟಾಣಿ ತರಕಾರಿ ಸಸಿಗಳನ್ನು ಬೆಳೆದು, ದಿನದಿನವೂ ಸುಮಾರು 10 ಕಿಗ್ರಾ ಮಾರಾಟ ಮಾಡಿ, ತಿಂಗಳಿಗೆ ರೂ.5 ಲಕ್ಷಕ್ಕಿಂತ ಅಧಿಕ ಆದಾಯ ಗಳಿಸುತ್ತಿದ್ದಾರೆ! ಅವರು ಎರ್ನಾಕುಲಂನ ಚಿತ್ತೂರಿನ ಮುರಲಿಕದವರು. 

ಇದೆಲ್ಲ ಶುರುವಾದದ್ದು ಬೆಂಗಳೂರಿನ ಹೋಟೆಲಿನಲ್ಲಿ ಊಟಕ್ಕೆ ಬಡಿಸಿದ್ದ ಇಂತಹ ಪುಟಾಣಿ ತರಕಾರಿ ಸಸಿಗಳನ್ನು ಅವರೊಮ್ಮೆ ತಿಂದಾಗ. ಅನಂತರ ಇಂತಹ ಸಸಿಗಳ ಬಗ್ಗೆ ಅವರಿಂದ ಮಾಹಿತಿಶೋಧ ಶುರು. ಇವು ಬೀಜ ಮೊಳೆತ ನಂತರ ಕೇವಲ ಒಂದು ವಾರ ಬೆಳೆದ ಪುಟಾಣಿ ಸಸಿಗಳು; ಪೋಷಕಾಂಶ ತುಂಬಿದ ಇವನ್ನು “ಸುಪರ್ ಫುಡ್” ಎಂದು ಕರೆಯುತ್ತಾರೆಂದು ತಿಳಿದಾಗ ಅವರಿಗೆ ಅಚ್ಚರಿ. 

ಅನಂತರ ತಮ್ಮ ಸಿಟಿಬ್ಯಾಂಕ್ ಉದ್ಯೋಗ ತೊರೆದ ಅಜಯ್ ಗೋಪಿನಾಥ್ ಈ ಪುಟಾಣಿ ಸಸಿಗಳನ್ನು ಮನೆಯಲ್ಲೇ ಬೆಳೆಯಲು ನಿರ್ಧರಿಸಿದರು. "2018ರ ಸುಮಾರಿನಲ್ಲಿ ನಾನು ಇವನ್ನು ಕೋಣೆಯೊಂದರಲ್ಲಿ ಪ್ರಾಯೋಗಿಕವಾಗಿ ಬೆಳೆಸಲು ಶುರು ಮಾಡಿದೆ. ಇವುಗಳ ಕೃಷಿ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾ, ಪ್ರಯೋಗಗಳನ್ನು ಮಾಡುತ್ತಾ ಇವನ್ನು ಬೆಳೆಸೋದು ಹೇಗೆಂದು  ತಿಳಿದುಕೊಳ್ಳಲು ಎರಡು ವರುಷಗಳೇ ತಗಲಿದವು. ಅನಂತರ ಮಾರಾಟಕ್ಕಾಗಿ ಇವನ್ನು ಬೆಳೆಸಲು ಆರಂಭಿಸಿದೆ” ಎನ್ನುತ್ತಾರೆ. 

ಅಜಯ್ ಗೋಪಿನಾಥರ (ವಯಸ್ಸು 53) ಮೊದಲ ಪ್ರಯತ್ನ ಯೂ-ಟ್ಯೂಬಿನ ಟ್ಯುಟೋರಿಯಲ್‌ಗಳನ್ನು ನೋಡಿ, ಹೆಸರು ಕಾಳುಗಳನ್ನು ಟಿಶ್ಯೂ ಪೇಪರಿನಲ್ಲಿ ಬಿತ್ತಿ ಬೆಳೆಯಲು ಪ್ರಯತ್ನಿಸಿದ್ದು. ಆದರೆ ಪುಟಾಣಿ ಸಸಿಗಳು ಚೆನ್ನಾಗಿ ಬೆಳೆಯಲಿಲ್ಲ. ಆ ಟ್ಯುಟೋರಿಯಲ್‌ಗಳು ಇವನ್ನು ಬೆಳೆಸುವ ಸರಿಯಾದ ವಿಧಾನವನ್ನು ತಿಳಿಸುತ್ತಿಲ್ಲ ಎಂದು ಅವರಿಗೆ ಅರಿವಾಯಿತು. 

ಪಂಜಾಬಿನ ಬಟಾಲದ ಜಗಮೋಹನ್ ಸಿಂಗ್ ನಾಗಿ (ಫೋಟೋ) ಅವರಿಗೆ ಬಾಲ್ಯದಿಂದಲೂ ಕೃಷಿಯಲ್ಲಿ ಆಸಕ್ತಿ. ಅದರಿಂದಾಗಿ ಪದವೀಧರರಾದ ನಂತರ ಅವರು ಕೃಷಿಯಲ್ಲೇ ತೊಡಗಿದರು. ಆರಂಭದಲ್ಲಿ ಕೆಲವೇ ಎಕರೆಗಳಲ್ಲಿ ಜೋಳ ಬೆಳೆಯುತ್ತಿದ್ದ ಅವರೀಗ "ಒಪ್ಪಂದ ಕೃಷಿ”ಯಲ್ಲಿ 300 ಎಕರೆಯಲ್ಲಿ ಜೋಳ, ಸಾಸಿವೆ ಮತ್ತು ಗೋಧಿ ಬೆಳೆಯುತ್ತಿದ್ದಾರೆ. ಜೊತೆಗೆ, ಕ್ಯಾರೆಟ್, ಬೀಟ್‌ರೂಟ್, ಟೊಮೆಟೋ ಮತ್ತು ಹೂಕೋಸು ತರಕಾರಿಗಳನ್ನೂ ಬೆಳೆಯುತ್ತಿದ್ದಾರೆ. 

ಮುನ್ನೂರು ರೈತರ ಜಮೀನಿನಲ್ಲಿ ಒಪ್ಪಂದದ ಮೂಲಕ ಬೆಳೆಸುತ್ತಿರುವ ಬೆಳೆಗಳ ಫಸಲಿನ ಖರೀದಿ; ಫಸಲನ್ನು ಸಂಸ್ಕರಿಸಿ, ಪೆಪ್ಸಿಕೋ, ಕೆಲ್ಲೋಗ್ಸ್ ಮತ್ತು ಡೊಮಿನೋಸ್ ಪಿಝಾ ಕಂಪೆನಿಗಳಿಗೆ ಮಾರಾಟ. ಇಂಗ್ಲೆಂಡ್, ನ್ಯೂಝಿಲೆಂಡ್, ದುಬೈ ಮತ್ತು ಹಾಂಕಾಂಗ್‌ಗಳಿಗೆ ಸಂಸ್ಕರಿತ ಉತ್ಪನ್ನಗಳ ರಫ್ತು. ಇವೆಲ್ಲದರಿಂದಾಗಿ, ಅವರ “ಕುಲವಂತ್ ನ್ಯೂಟ್ರಿಷನ್” ಕಂಪೆನಿಯ  ವಾರ್ಷಿಕ ವ್ಯವಹಾರ ರೂ.9 ಕೋಟಿ ದಾಟಿದೆ. 

ಬ್ರಿಟನಿನ ಬರ್ಮಿಂಗ್‌ಹ್ಯಾಮ್ ವಿಶ್ವವಿದ್ಯಾಲಯದಲ್ಲಿ ಏಕದಳ ಧಾನ್ಯಗಳ ಮಿಲ್ಲಿಂಗ್ ಮತ್ತು ಇಂಜಿನಿಯರಿಂಗ್‌ನಲ್ಲಿ ಪದವಿ ಗಳಿಸಿ ತನ್ನೂರಿಗೆ ಮರಳಿದರು ಜಗಮೋಹನ್ ಸಿಂಗ್. 1989ರಲ್ಲಿ ಕುಲವಂತ್ ನ್ಯೂಟ್ರಿಷನ್ ಎಂಬ ಕೃಷಿ ಆಧಾರಿತ ಉದ್ಯಮ ಸ್ಥಾಪಿಸಿ ಜೋಳದ ಸಂಸ್ಕರಣೆಗೆ ಶುರುವಿಟ್ಟರು. 

ಆದರೆ ಆಗ ಪಂಜಾಬಿನಲ್ಲಿ ಒಳ್ಳೆಯ ಗುಣಮಟ್ಟದ ಜೋಳದ ಫಸಲು ಖರೀದಿಗೆ ಸಿಗುತ್ತಿರಲಿಲ್ಲ. ಹಾಗಾಗಿ ಅವರು ಹಿಮಾಚಲ ಪ್ರದೇಶದಿಂದ ಜೋಳ ಖರೀದಿಸಲು ಶುರು ಮಾಡಿದರು. ಆದರೆ ಜೋಳದ ಸಾಗಾಟ ವೆಚ್ಚ ದುಬಾರಿಯಾಯಿತು. ಆದ್ದರಿಂದ ಅವರು ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಸಹಕಾರದಿಂದ ಪಂಜಾಬಿನಲ್ಲೇ ಜೋಳ ಬೆಳೆಸುವ ಯೋಜನೆಗೆ ಚಾಲನೆ ನೀಡಿದರು. ಇದರ ಅನುಸಾರ, ಕೃಷಿ ವಿಶ್ವವಿದ್ಯಾಲಯವು ರೈತರಿಗೆ ಉತ್ತಮ ಗುಣಮಟ್ಟದ ಜೋಳದ ಬೀಜ ಒದಗಿಸುತ್ತದೆ ಮತ್ತು ಅದನ್ನು ಬಿತ್ತಿ ಬೆಳೆಸಿದ ರೈತರಿಂದ ಜಗಮೋಹನ್ ಸಿಂಗ್ ಫಸಲು ಖರೀದಿಸ ತೊಡಗಿದರು. ಅನಂತರ, ತಾನೇ ಜೋಳ ಬೆಳೆಸಲು ನಿರ್ಧರಿಸಿದರು; ಅದಕ್ಕಾಗಿ 1991ರಿಂದ ಒಪ್ಪಂದ ಕೃಷಿ ಮೂಲಕ ಇತರ ರೈತರ ಜಮೀನಿನಲ್ಲಿ ಜೋಳದ ಕೃಷಿ ಶುರು ಮಾಡಿ, ಕ್ರಮೇಣ ತನಗೆ ಬೇಕಷ್ಟು ಜೋಳ ತಾನೇ ಬೆಳೆಯತೊಡಗಿದರು. 

ಉತ್ತರಪ್ರದೇಶದ ಮಹುರ್-ಸಾ ಗ್ರಾಮದ ರೈತರು ರಾಸಾಯನಿಕ ಕೃಷಿಯಿಂದ ದೂರವಾಗಿ ಇಂದಿಗೆ ಒಂದು ದಶಕ ಸಂದಿದೆ. 
ಆಗ ಅವರ ಗುರಿ: ರಾಸಾಯನಿಕ ಕೃಷಿಯಿಂದಾಗಿ ಏರುತ್ತಿರುವ ಒಳಸುರಿಗಳ ವೆಚ್ಚ ತಗ್ಗಿಸುವುದು. ಯಾಕೆಂದರೆ, ಗಂಗಾ ನದಿಯ ದಡದಲ್ಲಿ ಚಾಚಿರುವ ಬುಲಂದ್ ಷಹರ ಜಿಲ್ಲೆಯಲ್ಲಿರುವ ಆ ಗ್ರಾಮದಲ್ಲಿ ನೀರಾವರಿ ಮತ್ತು ಫಲವತ್ತಾದ ಮಣ್ಣು ತಲೆತಲಾಂತರಗಳಿಂದ ಲಭ್ಯ. ಹಾಗಾಗಿ ಅಲ್ಲಿನ ಪರಿಸ್ಥಿತಿ ಸಾವಯವ ಕೃಷಿಗೆ ಹೇಳಿ ಮಾಡಿಸಿದಂತಿದೆ. ಜೊತೆಗೆ, ಸಾವಯವ ಕೃಷಿ ಉತ್ಪನ್ನಗಳಿಗೆ ಏರುತ್ತಿರುವ ಬೇಡಿಕೆ ಲಾಭಕ್ಕೆ ರಹದಾರಿ ಎಂಬ ನಿರೀಕ್ಷೆ.

ಆದರೆ, ಮಹುರ್-ಸಾ ಗ್ರಾಮದ ರೈತರ ನಿರೀಕ್ಷೆಗಳು ಹುಸಿಯಾದವು. ಯಾಕೆ? ಯಾಕೆಂದರೆ, ಅಲ್ಲಿನ ಮಂಡಿ (ಮಾರುಕಟ್ಟೆ)ಯ ಮಧ್ಯವರ್ತಿಗಳು, ರೈತರು ಬೆಳೆದ ಸಾವಯವ ಹಣ್ಣು ಮತ್ತು ತರಕಾರಿಗಳಿಗೆ ಸ್ವಲ್ಪ ಹೆಚ್ಚಿನ ದರ ಪಾವತಿಸಿದರು; ಆದರೆ, ರೈತರ ಒಟ್ಟು ಫಸಲಿನ ಕೇವಲ ಶೇಕಡಾ 10 - 12ರಷ್ಟನ್ನು ಮಾತ್ರ ಖರೀದಿಸಿದರು! ಅದಲ್ಲದೆ, ಮಾರುಕಟ್ಟೆ ಕಮಿಷನ್, ತೂಕದಲ್ಲಿ ಕಡಿತ (ಹಾಳಾಗುವ ಫಸಲಿನ ಬಾಬ್ತು), ಲೋಡಿಂಗ್ ಮತ್ತು ಅನ್-ಲೋಡಿಂಗ್ ಮಜೂರಿ, ಸಾಗಾಟ ವೆಚ್ಚ - ಇವೆಲ್ಲದರ ಹೊರೆ ರೈತರೇ ಭರಿಸಬೇಕಾಗಿತ್ತು. 

ಇಂತಹ ಪರಿಸ್ಥಿತಿಯಲ್ಲಿ, ಕಳೆದ ವರುಷ (2021ರಲ್ಲಿ) ಆನ್-ಲೈನ್ ಸೂಪರ್ ಮಾರ್ಕೆಟ್ “ಬಿಗ್-ಬಾಸ್ಕೆಟ್” ಮಹುರ್-ಸಾ ಗ್ರಾಮಕ್ಕೆ ಆಗಮಿಸಿತು. ಇದು ಹಲವು ರೈತರ ಆದಾಯ ಹೆಚ್ಚಳಕ್ಕೆ ನಾಂದಿಯಾಯಿತು. ಯಾಕೆಂದರೆ, ರೈತರ ಫಸಲನ್ನು ಶೇ.15ರಷ್ಟು ಅಧಿಕ ಬೆಲೆಗೆ ಬಿಗ್-ಬಾಸ್ಕೆಟ್ ಖರೀದಿಸಿತು. ಮಾತ್ರವಲ್ಲ, ಸಾಗಾಟ ವೆಚ್ಚ ಮತ್ತು ಇತರ ವೆಚ್ಚಗಳು ಇಲ್ಲವಾದ ಕಾರಣ ಆ ಉಳಿತಾಯದಿಂದಾಗಿ ರೈತರಿಗೆ ಹೆಚ್ಚಿನ ಅನುಕೂಲವಾಯಿತು.

ತಿರುವನಂತಪುರದ ಕೃಷಿಕ ವಿನೋದ್ ವೇಣುಗೋಪಾಲ್ ಅವರ ರಬ್ಬರ್ ತೋಟದ ವಿಸ್ತೀರ್ಣ ಒಂದೂವರೆ ಎಕರೆ. ರಬ್ಬರ್ ತೋಟದಿಂದ ಉತ್ತಮ ಇಳುವರಿ ಮತ್ತು ಆದಾಯ ಸಿಗುತ್ತಿತ್ತು.  ಆದರೆ ಅವರಿಗೊಂದು ಕನಸು: ಅದನ್ನು ಸಾವಯವ ತೋಟವನ್ನಾಗಿ ಪರಿವರ್ತಿಸಬೇಕು ಎಂದು. 

ಸಸ್ಯಶಾಸ್ತ್ರ ಪದವೀಧರರಾದ ವಿನೋದ್ ವೇಣುಗೋಪಾಲ್ ಕೊನೆಗೊಮ್ಮೆ ತಮ್ಮ ಕನಸು ನನಸಾಗಿಸಲು 2019ರಲ್ಲಿ ನಿರ್ಧರಿಸಿದರು. ಇನ್ನಿಬ್ಬರು ಈ ಸಾಹಸದಲ್ಲಿ ಅವರ ಜೊತೆಗೂಡಿದರು. ತೋಟದ ರಬ್ಬರ್ ಮರಗಳನ್ನೆಲ್ಲ ಕಿತ್ತು ಹಾಕಿ, ಮರಗೆಣಸಿನ (ಇಂಗ್ಲಿಷ್ ಹೆಸರು: ಟಾಪಿಯೋಕ) ತುಂಡುಗಳನ್ನು ನೆಟ್ಟರು. ಅವರ ಪ್ರಯತ್ನ ಯಶಸ್ವಿಯಾಯಿತು: ಎಂಟು ತಿಂಗಳ ನಂತರ ಅವರು ತಿರುವನಂತಪುರದ ಮಲಯಮ್‌ನ ತಮ್ಮ ತೋಟದಿಂದ ಕೊಯ್ಲು ಮಾಡಿದ್ದು 11,000 ಕಿಗ್ರಾ ಮರಗೆಣಸು!

ವಿನೋದ್ ವೇಣುಗೋಪಾಲ್ ತಮ್ಮ ಹೊಸ ಯೋಜನೆ ಕೈಗೆತ್ತಿಕೊಂಡಾಗ ಅವರ ಬಂಧುಗಳೂ ಇತರರೂ ಟೀಕಿಸಿದ್ದರು. ಯಾಕೆಂದರೆ ಅವರ ತೋಟದಲ್ಲಿ ಬಹುವಾರ್ಷಿಕ ಬೆಳೆಯಾದ ರಬ್ಬರ್ ಉತ್ತಮ ಇಳುವರಿ ನೀಡುತ್ತಿತ್ತು. ವಿನೋದ್ “ವೇರ್ ಇನ್ ಟ್ರಿವೆಂಡ್ರಮ್” ಎಂಬ ಫೇಸ್-ಬುಕ್ ಪುಟದಲ್ಲಿ ತಮ್ಮ ಯೋಜನೆಯ ಬಗ್ಗೆ ಪ್ರಕಟಿಸಿ, ಆಸಕ್ತರು ಜೊತೆಗಾರರಾಗಬಹುದೆಂದು ಆಹ್ವಾನಿಸಿದರು. ಕೊನೆಗೆ ಅನು ಜೋಸೆಫ್ ಮತ್ತು ಫಿಲಿಫ್ ಚಾಕೋ ಅವರನ್ನು ಜೊತೆಗಾರರನ್ನಾಗಿ ಆಯ್ಕೆ ಮಾಡಿದರು. “ನನಗೆ ಯೋಜನೆಯಲ್ಲಿ ಹಣ ಹೂಡಬಲ್ಲವರು ಬೇಕಾಗಿರಲಿಲ್ಲ; ಬದಲಾಗಿ ಸಮಯ ಮತ್ತು ಶ್ರಮ ಹೂಡಬಲ್ಲವರು ಬೇಕಾಗಿದ್ದರು" ಎನ್ನುತ್ತಾರೆ ವಿನೋದ್. 

ತಿರುವನಂತಪುರದ ಕೇಂದ್ರೀಯ ಗೆಡ್ಡೆ ಬೆಳೆಗಳ ಸಂಶೋಧನಾ ಕೇಂದ್ರದಿಂದ 2,000 ಮರಗೆಣಸಿನ ತುಂಡುಗಳನ್ನು ತಂದು, ಡಿಸೆಂಬರ 2019ರಲ್ಲಿ ತಮ್ಮ ತೋಟದಲ್ಲಿ ನೆಟ್ಟರು. (ಸಸ್ಯಶಾಸ್ತ್ರೀಯ ಹೆಸರು: ಮನಿಹೋಟ್ ಎಸ್ಕುಲೆಂಟಾ; ಇಂಗ್ಲಿಷ್ ಹೆಸರು: ಟಾಪಿಯೋಕಾ ಮತ್ತು ಕಸ್ಸವಾ; ಸಸ್ಯಕುಟುಂಬ: ಇಫೋರ್-ಬಿಯೇಸಿ ಅಂದರೆ ಹರಳು ಸಸ್ಯದ ಕುಟುಂಬ) ವಿನೋದರ ತೋಟದಲ್ಲಿತ್ತು ಫಲವತ್ತಾದ ಕೆಂಪು ಮಣ್ಣು. ಅದು ಯಾವುದೇ ಬೆಳೆಗೆ ಸೂಕ್ತವಾಗಿತ್ತು. 

ಭಾರತದ ಹಲವು ರಾಜ್ಯಗಳಲ್ಲಿ ಹೈನಪಶುಗಳ ಮೇವಿನ ದರ ಏರುತ್ತಲೇ ಇದೆ. ಇದರಿಂದಾಗಿ ದನಗಳನ್ನು ಸಾಕುತ್ತಿರುವ ಹಲವು ರೈತರ ತಮ್ಮ ದನಗಳನ್ನು ಮಾರುತ್ತಿದ್ದಾರೆ. ಉದಾಹರಣೆಗೆ, ಹರಿಯಾಣದ ಗುರುಗ್ರಾಮ ಜಿಲ್ಲೆಯ ಲೋಕ್ರಾ ಗ್ರಾಮದ ಮಂಗತ್ ರಾಮ್ ಕಳೆದ ವರುಷ 39 ದನ, ಕರು ಮತ್ತು ಹೋರಿಗಳನ್ನು ಸಾಕುತ್ತಾ, ಹಾಲು ಮಾರಾಟದಿಂದ ತಿಂಗಳಿಗೆ ರೂ.2.43 ಲಕ್ಷ ಗಳಿಸುತ್ತಿದ್ದರು. ಆದರೆ, ನವಂಬರ್ 2021ರಲ್ಲಿ ಮೇವಿನ ಬೆಲೆ ಟನ್ನಿಗೆ ರೂ.4,250 ಇದ್ದದ್ದು ಮೇ 2022ರಲ್ಲಿ ರೂ.15,000ಕ್ಕೆ ಏರಿತು. ಅಂದರೆ, ಕೇವಲ ಆರು ತಿಂಗಳಲ್ಲಿ ಮೂರು ಪಟ್ಟು ಬೆಲೆ ಹೆಚ್ಚಳ! 
ಆದರೆ, ಹಾಲಿನ ಬೆಲೆ ಹೆಚ್ಚಾಗಿಲ್ಲ. ಆದ್ದರಿಂದ, ಅವರಿಗೆ ಡಿಸೆಂಬರ್ 2021ರಿಂದ ಮಾರ್ಚ್ 2022 ಅವಧಿಯಲ್ಲೇ ಸುಮಾರು ಮೂರು ಲಕ್ಷ ರೂಪಾಯಿ ನಷ್ಟ. ಹೆಚ್ಚುತ್ತಿರುವ ನಷ್ಟ ಭರಿಸಲಾಗದೆ, ಮೇ ತಿಂಗಳ ಹೊತ್ತಿಗೆ ಅವರು ಕೆಲವು ದನಗಳನ್ನು ದಾನ ಮಾಡಿದರು ಮತ್ತು ಹಲವು ದನಕರುಗಳನ್ನು ಕೇವಲ 5,000 ರೂಪಾಯಿ ಬೆಲೆಗೆ ಮಾರಾಟ ಮಾಡಿದರು (ಆ ಮುಂಚೆ ಅಲ್ಲಿ ದನಗಳ ಮಾರಾಟ ಬೆಲೆ ತಲಾ ರೂ.80,000) 
ಅವರು ಮಾತ್ರವಲ್ಲ, ಅಲ್ಲಿ ಬಹುಪಾಲು ದನ ಸಾಕಣೆದಾರರು ದನಕರು ಮಾರಿದ್ದಾರೆ. ಹಾಗಾಗಿ ಒಂದು ವರುಷದ ಮುಂಚೆ 450 ದನಕರುಗಳಿದ್ದ ಹಳ್ಳಿಯಲ್ಲಿ ಈಗ ಉಳಿದಿರುವುದು ಕೇವಲ 150 ದನಕರುಗಳು. 
ಹರಿಯಾಣ ಮಾತ್ರವಲ್ಲ, ರಾಜಸ್ಥಾನ, ಉತ್ತರ ಪ್ರದೇಶ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಖಂಡ ಮತ್ತು ಮಧ್ಯಪ್ರದೇಶ - ಈ ಆರು ರಾಜ್ಯಗಳಲ್ಲಿಯೂ ದನಸಾಕಣೆದಾರರದ್ದು ಇದೇ ಕಥೆವ್ಯಥೆ. ಹಸುರುಮೇವು ಮತ್ತು ಒಣಮೇವು - ಎರಡರ ಬೆಲೆಯಲ್ಲಿಯೂ ತೀವ್ರವಾಗಿ ಏರಿಕೆಯಾಗಿದ್ದು ಅವರು ತತ್ತರಿಸಿದ್ದಾರೆ. 

ಯುಕ್ರೈನ್ ದೇಶದ ಮೇಲೆ ಫೆಬ್ರವರಿ 2022ರ ಕೊನೆಯಲ್ಲಿ ರಷ್ಯಾ ಆಕ್ರಮಣ ಮಾಡಿ ಆರಂಭಿಸಿದ ಯುದ್ಧ ಇನ್ನೂ ಮುಗಿದಿಲ್ಲ. ಈ ಯುದ್ಧದಿಂದಾಗಿ ಜಾಗತಿಕ ಗೋಧಿ ರಫ್ತು ಮತ್ತು ಆಮದಿನ ವಹಿವಾಟಿನಲ್ಲಿ ಅಲ್ಲೋಲಕಲ್ಲೋಲವಾಗಿದೆ. 

ಯಾಕೆಂದರೆ, ಜಗತ್ತಿನಲ್ಲಿ ಗೋಧಿ ರಫ್ತಿನಲ್ಲಿ ರಷ್ಯಾ, ಯು.ಎಸ್.ಎ., ಮತ್ತು ಆಸ್ಟ್ರೇಲಿಯಾ ಅನುಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ. ಇವುಗಳು ವರುಷದಲ್ಲಿ ರಫ್ತು ಮಾಡುವ ಗೋಧಿಯ ಮೌಲ್ಯ ತಲಾ ಏಳು ಬಿಲಿಯನ್ ಡಾಲರ್. ಗೋಧಿ ರಫ್ತಿನಲ್ಲಿ ಕೆನಡಾದ ನಂತರ ನಾಲ್ಕನೇ ಸ್ಥಾನ ಯುಕ್ರೈನ್ ದೇಶದ್ದು. ಆ ಯುದ್ಧದಿಂದಾಗಿ, ಯುಕ್ರೈನ್ ಮತ್ತು ಅತ್ಯಧಿಕ ಗೋಧಿ ಉತ್ಪಾದಿಸುವ ರಷ್ಯಾದಿಂದ (36.27 ಮಿಲಿಯ ಟನ್) ಗೋಧಿಯ ರಫ್ತು ನಿಂತು ಹೋಯಿತು. ಜಾಗತಿಕ ಮಾರುಕಟ್ಟೆಯಲ್ಲಿ ಗೋಧಿಯ ಬೆಲೆ ಗಗನಕ್ಕೇರಿತು. ಮೇ ತಿಂಗಳಿನಲ್ಲಿ ಗೋಧಿಯ ಬೆಲೆಯಲ್ಲಿ ಶೇಕಡಾ 56ರಷ್ಟು ಹೆಚ್ಚಳವಾಯಿತೆಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ, ಭಾರತದ ಆಹಾರ ಮತ್ತು ವಾಣಿಜ್ಯ ಸಚಿವರು ಎಪ್ರಿಲ್ 2022ರ 2ನೇ ವಾರದಲ್ಲಿ ಭರ್ಜರಿ 10-15 ಮಿಲಿಯ ಟನ್ ಗೋಧಿ ರಫ್ತು ಬಗ್ಗೆ ಘೋಷಿಸಿದರು. ಆದರೆ, ಅದಾಗಿ ಒಂದು ತಿಂಗಳೊಳಗೆ ಭಾರತ ಗೋಧಿ ರಫ್ತು ನಿಷೇಧಿಸಿತು!

ಈ ಅವಾಂತರಕ್ಕೆ ಕಾರಣವೇನು? ಫೆಬ್ರವರಿ 2022ರ ಎರಡನೇ ವಾರದಲ್ಲಿ, ಕೃಷಿ ಮಂತ್ರಾಲಯವು ಆಹಾರಧಾನ್ಯಗಳ ವಾರ್ಷಿಕ ಉತ್ಪಾದನೆ 111.3 ಮಿಲಿಯನ್ ಟನ್ ಎಂದು ಅಂದಾಜಿಸಿತ್ತು. ಅದನ್ನು ನಂಬಿ ಆಹಾರ ಮಂತ್ರಾಲಯ ಮತ್ತು ವಾಣಿಜ್ಯ ಮಂತ್ರಾಲಯಗಳು, ಗೋಧಿ ರಫ್ತಿನ ಸಹಿತ, ಮುಖ್ಯವಾದ ಧೋರಣಾತ್ಮಕ ನಿರ್ಧಾರಗಳನ್ನು ಕೈಗೊಂಡವು. ಆದರೆ, ಆಹಾರಧಾನ್ಯ ಉತ್ಪಾದನೆಯ ಅಂದಾಜಿನ ಆ ಅಂಕೆಸಂಖ್ಯೆ ನಂಬಲರ್ಹವಾಗಿರಲಿಲ್ಲ ಎಂಬುದು ಈಗ ನಮಗೆ ತಿಳಿದಿದೆ. 

ಕಷ್ಟ ಬಂದಾಗಲೆಲ್ಲ ಸಾಂತ್ವನಕ್ಕಾಗಿ ಅವನು ಹನುಮಂತನ ದೇವಸ್ಥಾನಕ್ಕೆ ಬಂದು ಪ್ರಾರ್ಥಿಸುತ್ತಿದ್ದ. ಇವತ್ತೂ ಅಲ್ಲಿಗೆ ಬಂದು, ಅವನು ದೇವಸ್ಥಾನದ ಗಂಟೆ ಬಾರಿಸಿದ. ಹಣೆಗೆ ಕುಂಕುಮ ಹಚ್ಚಿಕೊಂಡ. ಕೈಗಳನ್ನು ಮುಗಿದು, ಹನುಮಂತನಿಗೆ ತನ್ನ ಕೊನೆಯ ಪ್ರಾರ್ಥನೆ ಸಲ್ಲಿಸಲು ತಲೆ ಬಾಗಿಸುತ್ತಲೇ ಅವನು ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದ. 

ಬದುಕಿನ ಬೆಳಕೇ ಆರಿ ಹೋದಂತೆ ಅವನನ್ನು ಕತ್ತಲೆ ಆವರಿಸಿತು. ಕೆಲವು ಕ್ಷಣ ಅವನ ಕಣ್ಣು ರೆಪ್ಪೆಗಳು ಅಲುಗಾಡಿದವು. ಭ್ರಮಾಲೋಕದಲ್ಲಿ ವಿಹರಿಸಿದಂತೆ ಅವನ ತಲೆ ಹಗುರಾಯಿತು. ಪರ್ವತದಂತಹ ಅವನ ಚಿಂತೆಗಳೆಲ್ಲ ಕರಗಿ ಹೋದವು. ಎಚ್ಚರವಾಗಿರಬೇಕೆಂಬ ಹಂಬಲದ ಜೊತೆ ಗುದ್ದಾಡುತ್ತಿದ್ದ ಅವನ ಮೆದುಳು ತಣ್ಣಗಾಯಿತು.

ಅನಂತರ ಅವನು ಕಣ್ಣು ಬಿಡಿಸಿದಾಗ, ಚಾವಣಿಯಲ್ಲಿ ನಿಶ್ಚಲವಾಗಿದ್ದ ಒಂದು ಫ್ಯಾನ್ ಕಾಣಿಸಿತು. ಅದರ ರೆಕ್ಕೆಗಳು ಜೇಡನ ಬಲೆ ಮತ್ತು ಧೂಳು ತುಂಬಿ ಕಪ್ಪಗಾಗಿದ್ದವು. ಅದನ್ನು ಸ್ವಚ್ಛ ಮಾಡದೆ ವರುಷಗಳಾಗಿದ್ದವು. ಮಂಪರಿನಲ್ಲಿದ್ದ ಅವನಿಗೆ ಎಲ್ಲವೂ ಮಸುಕುಮಸುಕಾಗಿ ಕಾಣಿಸಿತು. ನಿಧಾನವಾಗಿ ಅವನ ಪ್ರಜ್ಞೆ ಮರುಕಳಿಸಿತು.

ಒಂದು ಮಂಚದಲ್ಲಿ ನಜ್ಜುಗುಜ್ಜಾದ ಹಾಸಿಗೆಯಲ್ಲಿ ಹರಿದ ಹೊದಿಕೆ ಹಾಸಿ ತನ್ನನ್ನು ಮಲಗಿಸಲಾಗಿದೆ ಎಂದು ಅವನಿಗೆ ಅರಿವಾಯಿತು. ಪಕ್ಕದಲ್ಲಿದ್ದ ಕಬ್ಬಿಣದ ಸ್ಟ್ಯಾಂಡಿಗೆ ಒಂದು ಸಲೈನ್ ಬಾಟಲಿಯನ್ನು ನೇತಾಡಿಸಲಾಗಿತ್ತು. ಅದರಿಂದ ದ್ರಾವಣಗಳು ಮತ್ತು ಔಷಧಿಗಳು ಅವನ ರಕ್ತನಾಳಕ್ಕೆ ಹನಿಹನಿಯಾಗಿ ಇಳಿದು ಬರುತ್ತಿದ್ದವು. ಅವನ ಮಂಚದ ಹಿಂಭಾಗದಲ್ಲಿ ಇರಿಸಲಾಗಿದ್ದ ಇಸಿಜಿ ಮೊನಿಟರ್ ಸ್ಕ್ರೀನಿನಲ್ಲಿ ಒಂದಾದ ಮೇಲೋಂದರಂತೆ ವಾರೆಕೋರೆ ಗೆರೆಗಳು ಮೂಡುತ್ತಿದ್ದಂತೆ, ಲಯಬದ್ಧವಾದ ಟಿಕ್-ಟಿಕ್-ಟಿಕ್ ಸದ್ದು ಕೇಳಿಬರುತ್ತಿತ್ತು. ಡಿಜಿಟಲ್ ಸ್ಕ್ರೀನಿನಲ್ಲಿ ಅವನ ರಕ್ತದೊತ್ತಡ ಮತ್ತು ಹೃದಯ ಬಡಿತದ ದರ ಮೂಡಿ ಬರುತ್ತಿತ್ತು. ಆ ದೊಡ್ಡ ಕೋಣೆಯುದ್ದಕ್ಕೂ ಅವನೊಮ್ಮೆ ಕಣ್ಣಾಡಿಸಿದ. ತಾನು ಮಲಗಿದ್ದೇನೆ ಎಂಬುದು ಅವನಿಗೆ ಸ್ಪಷ್ಟವಾಯಿತು. ಅಷ್ಟರಲ್ಲಿ ಅವನ ಆತಂಕ ನುಗ್ಗಿ ಬಂತು. ಅವನಿಗೆ ಸುಸ್ತಾಯಿತು. ಅವನ ಹೃದಯ ಮುದುಡಿತು. 

ಕೃಷಿರಂಗದಲ್ಲಿ  ಡ್ರೋನ್ ಬಳಕೆಗೆ ವಿಪುಲ ಅವಕಾಶ 
ಬೆಳೆಗಳಿಗೆ ಪೋಷಕಾಂಶಗಳು ಮತ್ತು ಪೀಡೆನಾಶಕಗಳನ್ನು ಸಿಂಪಡಿಸಲು ಡ್ರೋನ್ ಸೇವೆ ಭಾರತದಲ್ಲಿ ಹಲವೆಡೆ ಶುರುವಾಗಿದೆ. ಇದರಿಂದಾಗಿ ಕೃಷಿಕರಿಗೆ ಸಮಯ ಮತ್ತು ವೆಚ್ಚದಲ್ಲಿ ಭಾರೀ ಉಳಿತಾಯ.

ಜನವರಿ 2022ರಲ್ಲಿ ಚಿತ್ರದುರ್ಗದ ಸಿರಿಗೆರೆಯಲ್ಲಿ ರೈತ ಗುರುಶಾಂತಪ್ಪರ ನಾಲ್ಕು ಎಕ್ರೆ ಅಡಿಕೆ ತೋಟಕ್ಕೆ ಕೇವಲ ಎರಡು ಗಂಟೆಯಲ್ಲಿ ಡ್ರೋನ್‌ನಿಂದ ಪೀಡೆನಾಶಕ ಸಿಂಪರಣೆ ಮಾಡಿದ್ದು ದೊಡ್ಡ ಸುದ್ದಿಯಾಯಿತು. ಯಾಕೆಂದರೆ ಕೆಲಸಗಾರರಿಂದ ಸಿಂಪರಣೆ ಮಾಡಿಸಲು ನಾಲ್ಕು ದಿನ ತಗಲುತ್ತಿತ್ತು ಮತ್ತು ಸಾವಿರಾರು ರೂಪಾಯಿ ವೆಚ್ಚವಾಗುತ್ತಿತ್ತು. ಡ್ರೋನ್ ಸಿಂಪರಣೆಗೆ ತಗಲಿದ ವೆಚ್ಚ ರೂ.1,350 ಮಾತ್ರ! 

ಈ ಡ್ರೋನ್ ಸಿಂಪರಣೆ ನಡೆಸಿದ ಕಂಪೆನಿ ಮಲ್ಟಿಪ್ಲೆಕ್ಸ್ ಡ್ರೋನ್ ಪ್ರೈ.ಲಿ. ಇದು ಈಗಾಗಲೇ ಶಿವಮೊಗ್ಗ, ಚಿಕ್ಕಮಗಳೂರು, ಗುಲ್ಬರ್ಗಾ ಮತ್ತು ಬೀದರ್ ಜಿಲ್ಲೆಗಳ 3,200 ಎಕ್ರೆ ಕೃಷಿ ಜಮೀನಿನಲ್ಲಿ ಡ್ರೋನ್ ಸಿಂಪರಣೆ ನಡೆಸಿದೆ. ಅಡಿಕೆ, ಭತ್ತ, ಗೋಧಿ ಮತ್ತು ಕಬ್ಬು ಬೆಳೆಗಳ ರೋಗ ಹಾಗೂ ಕೀಟ ಬಾಧೆ ನಿಯಂತ್ರಣಕ್ಕೆ ಡ್ರೋನಿನಿಂದ ಪೀಡೆನಾಶಕ ಸಿಂಪರಣೆ ಸುಲಭ. ಭತ್ತ ಮತ್ತು ಗೋಧಿ ಒಂದೆಕ್ರೆ ಹೊಲಕ್ಕೆ ಪೀಡೆನಾಶಕ ಸಿಂಪರಣೆಗೆ ಕೇವಲ ಹತ್ತು ನಿಮಿಷ ಸಾಕು!

ಮಹಾರಾಷ್ಟ್ರ, ಆಂಧ್ರಪ್ರದೇಶ, ಬಿಹಾರ ಮತ್ತು ಕೇರಳ ರಾಜಗಳಲ್ಲಿಯೂ ಕೃಷಿ ಕೆಲಸಗಳಿಗೆ ಡ್ರೋನ್ ಬಳಸಲಾಗಿದೆ. ಇದು ಪ್ರಯೋಜನಕಾರಿ ಎಂಬುದು  ಕೇರಳದ ಕುಮಾರಕೋಂನ ಪಳ್ಳಿಕಾಯಲಿನ ಜೋಸೆಫ್ ಅಂತೋನಿ (ಚಾಚಪ್ಪನ್) ಅನುಭವ.
ಲೀಸಿಗೆ ಪಡೆದ ಎಂಭತ್ತು ಎಕ್ರೆ ಜಮೀನಿನಲ್ಲಿ ಅವರಿಂದ ಭತ್ತದ ಕೃಷಿ. ಭತ್ತದ ಸಸಿಗಳ ಬೆಳವಣಿಗೆ ಚೆನ್ನಾಗಿಲ್ಲ ಎಂಬುದನ್ನು ಅವರು ಗಮನಿಸಿದರು. ಹತ್ತಿರದ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿದರು. ಡ್ರೋನಿನಿಂದ ಸೂಕ್ಷ್ಮ ಪೋಷಕಾಂಶಗಳ ಸಿಂಪರಣೆ ಸೂಕ್ತವೆಂಬುದು ಅಲ್ಲಿನ ಪರಿಣತರ ಸಲಹೆ. ಅವರ ಹತ್ತು ಎಕ್ರೆ ಭತ್ತದ ಬೆಳೆಗೆ ಕೇಂದ್ರದ ಪ್ರಾತ್ಯಕ್ಷಿಕೆ ಕಾರ್ಯಕ್ರಮದ ಅಂಗವಾಗಿ ಡ್ರೋನಿನಿಂದ ಸಿಂಪರಣೆ. 

Pages