“ಸಂಪದ"ದಲ್ಲಿ ಬರಹಗಳನ್ನು ಪ್ರಕಟಿಸುವವರಿಗೂ ಓದುವವರಿಗೂ ಒಂದು ಸಂತಸದ ಸುದ್ದಿ: “ಸಂಪದ"ದಲ್ಲಿ ಬರಹಗಳ ಸಂಖ್ಯೆ 60,000 ದಾಟಲಿದೆ! “ಸಂಪದ" ಕನ್ನಡ ಬರಹಗಳ ದೊಡ್ಡ ಖಜಾನೆಯಾಗಿದೆ ಎಂದು ಸಂಭ್ರಮಿಸೋಣ.
ಈ ಬೆಳವಣಿಗೆಯ ಒಂದು ವಿಶೇಷವೆಂದರೆ ಕನ್ನಡ ಜಾಲತಾಣಗಳ ಜಗತ್ತಿನಲ್ಲಿ “ಸಂಪದ"ಕ್ಕೆ ಸಾಟಿಯಾದ ಪೋರ್ಟಲ್ ಹಾಗೂ ಆಪ್ ಇನ್ನೊಂದಿಲ್ಲ. ಇಂಟರ್-ನೆಟ್‌ನಲ್ಲಿ ತಮ್ಮ ಲೇಖನ/ ಬರಹಗಳನ್ನು ತಾವೇ ಪ್ರಕಟಿಸುವ ಅನುಕೂಲ ಒದಗಿಸಿರುವ ಪೋರ್ಟಲ್ ಹಾಗೂ ಆಪ್‌ಗಳಲ್ಲಿ “ಸಂಪದ"ದ ತಂತ್ರಜ್ಞಾನ ಅತ್ಯಂತ ಬಳಕೆದಾರಸ್ನೇಹಿ ಎಂಬುದಕ್ಕೆ ಇದರಲ್ಲಿ ಈ ವರೆಗೆ ಪ್ರಕಟವಾಗಿರುವ ಬರಹಗಳ ಸಂಖ್ಯೆಯೇ ಪುರಾವೆ, ಅಲ್ಲವೇ?
ಗಮನಿಸಬೇಕಾದ ಇನ್ನೊಂದು ಸಂಗತಿ: “ಸಂಪದ"ದಲ್ಲಿ ಬರಹ ಪ್ರಕಟಿಸಿರುವ ಎಲ್ಲರೂ ಫ್ರೀಲ್ಯಾನ್ಸಿಗಳು. ಇಲ್ಲಿ ತಮ್ಮ ಬರಹಗಳ ಮೂಲಕ ಮುನ್ನಡಿಯಿಟ್ಟು, ಹೆಸರುವಾಸಿ ಬರಹಗಾರರಾಗಿ ಬೆಳೆದವರು ಹಲವರು ಎಂಬುದೇ “ಸಂಪದ ಬಳಗ”ದಲ್ಲಿ ಧನ್ಯತೆ ಮೂಡಿಸುತ್ತಿದೆ.
ಫೇಸ್-ಬುಕ್, ಟ್ವಿಟ್ಟರ್-ಗಳ ಕಾಲದಲ್ಲಿ “ಸಂಪದ"ದಂತಹ ಪೋರ್ಟಲುಗಳಿಗೆ ಉಳಿಗಾಲವಿಲ್ಲ ಎಂದವರಿಗೆಲ್ಲ ಸವಾಲಾಗಿ ಮುಂದುವರಿಯುತ್ತಿದೆ “ಸಂಪದ." ಹೊಸಕಾಲದ ಹೊಸ ಪೋರ್ಟಲುಗಳಲ್ಲಿ ಮುಳುಗಿ ಎದ್ದು ಬೇಜಾರಾಗಿ ‘ಸಂಪದ"ಕ್ಕೆ ಮರಳಿ ಬಂದವರು ಹಲವರಿದ್ದಾರೆ.
ಕೊಲ್ಲಾಜ್ - ಇದು ಅತ್ಯಂತ ಸುಲಭವಾದ ಹಾಗೂ ನಮ್ಮ ಸೃಜನಶೀಲತೆಗೆ ಸವಾಲೆಸೆಯುವ ಕಲಾ ಚಟುವಟಿಕೆ. ಚಿತ್ರಕಲೆಯ ಒಂದು ರೂಪ ಇದು. ಇದರಲ್ಲಿ ವಿವಿಧ ವಸ್ತುಗಳನ್ನು ಕಲಾತ್ಮಕವಾಗಿ ಜೋಡಿಸಿ/ ಹೊಂದಿಸಿ, ಒಂದು ಸಂದೇಶ ಅಥವಾ ಐಡಿಯಾ ವ್ಯಕ್ತಪಡಿಸುವ ಹೊಸತೊಂದು ಚಿತ್ರಣವನ್ನು ರೂಪಿಸಲಾಗುತ್ತದೆ.
ಕೊಲ್ಲಾಜ್ ಬಗ್ಗೆ ಇಂಗ್ಲಿಷಿನಲ್ಲಿ ಹಲವಾರು ಪುಸ್ತಕಗಳಿವೆ: ಕೊಲ್ಲಾಜ್; ದ ಕೊಲ್ಲಾಜ್ ಐಡಿಯಾಸ್ ಬುಕ್; ದ ಕೊಲ್ಲಾಜ್ ವರ್ಕ್ ಬುಕ್; ಪ್ರಾಜೆಕ್ಟ್ ಕೊಲ್ಲಾಜ್ ಇತ್ಯಾದಿ. ಎಲ್ಲದರಲ್ಲಿಯೂ ಉಪಯುಕ್ತ ಮಾಹಿತಿ ಲಭ್ಯ.
ಟಾಮ್ ಕ್ವಿಗ್ಲೆ ಎಂಬವರ 26 ಮಾರ್ಚ್ 2021ರ ಯೂಟ್ಯೂಬ್ ವಿಡಿಯೋದಿಂದಲೂ ಆಕರ್ಷಕ ಕೊಲ್ಲಾಜ್ ರಚಿಸುವುದು ಹೇಗೆಂದು ಮಾಹಿತಿ ಪಡೆಯಬಹುದು.
ಹಲವು ವೆಬ್-ಸೈಟ್‌ಗಳಲ್ಲಿ ಸಾವಿರಾರು ಕೊಲ್ಲಾಜ್ ಪುಕ್ಕಟೆಯಾಗಿ ಲಭ್ಯ. ಉದಾಹರಣೆಗೆ, ಮೂರು ವೆಬ್-ಸೈಟ್‌ಗಳು ಮತ್ತು ಅವುಗಳಲ್ಲಿರುವ ಕೊಲ್ಲಾಜ್ ಫೋಟೋಗಳ ಸಂಖ್ಯೆ ಹೀಗಿದೆ:
www.freepik.com 95,000
www.istockphoto.com 2,30,000
unsplash.com 1,000
ಜಗತ್ತಿನಲ್ಲೆಲ್ಲ ಜನಜನಿತವಾದ ಜಪಾನಿನ ಕಲೆ: ಒರಿಗಾಮಿ. ಇದು ಕಾಗದದ ಹಾಳೆ ಮಡಚಿ ವಿವಿಧ ವಸ್ತು, ಪ್ರಾಣಿ, ಪಕ್ಷಿ, ಸಸ್ಯ, ವಾಹನ ಅಥವಾ ವ್ಯಕ್ತಿಗಳ ಪ್ರತಿಕೃತಿ ರಚಿಸುವ ಅದ್ಭುತ ಕಲೆ. ಜಪಾನಿ ಭಾಷೆಯಲ್ಲಿ ಒರಿಗಾಮಿ ಅಂದರೆ ಕಾಗದ ಮಡಚುವುದು
ಇದರ ಬಗ್ಗೆ ನೂರಾರು ಪುಸ್ತಕಗಳು ಪುಸ್ತಕ ಮಳಿಗೆಗಳಲ್ಲಿ ಲಭ್ಯ. ಕನ್ನಡದಲ್ಲಿಯೂ ಒರಿಗಾಮಿ ಪುಸ್ತಕಗಳಿವೆ. ಕನ್ನಡದ ವಾರಪತ್ರಿಕೆ “ತರಂಗ"ದಲ್ಲಿ ಒರಿಗಾಮಿ ಲೇಖನ ಸರಣಿ ಪ್ರಕಟವಾಗಿತ್ತು. ಹಲವು ಸಂಸ್ಥೆಗಳು ಒರಿಗಾಮಿ ತರಬೇತಿ ನೀಡುತ್ತವೆ ಹಾಗೂ ಒರಿಗಾಮಿ ಕಲಾಕೃತಿ ರಚಿಸುವ ಸ್ಪರ್ಧೆಗಳನ್ನು ನಡೆಸುತ್ತವೆ.
"ಒರಿಗಾಮಿ ಪೇಪರ್ ಫೋಲ್ಡಿಂಗ್” ಎಂಬುದು ಐದು ಪುಸ್ತಕಗಳ ಸಂಪುಟ. ಪ್ರಕಾಶಕರು: ಮನೋಜ್ ಪಬ್ಲಿಕೇಷನ್ಸ್, 761, ಮುಖ್ಯ ರಸ್ತೆ, ಬುರಾರಿ, ಡೆಲ್ಲಿ 110084. ಇದರ ಕ್ರಮಸಂಖ್ಯೆ: ಐಎಸ್‌ಬಿಎನ್ 978-81-310-2390-7.
ಈಗಾಗಲೇ ಬೀಜಗಳಿಂದ ಚಿತ್ರಾಕೃತಿಗಳ ರಚನೆ ಮತ್ತು ಮಂಡಲಗಳಿಗೆ ಬಣ್ಣ ತುಂಬುವ ಬಗ್ಗೆ ತಿಳಿದುಕೊಂಡಿದ್ದೇವೆ. (ಈ ಸರಣಿಯ ಒಂದನೇ ಮತ್ತು ಎರಡನೇ ಬರಹಗಳಿಂದ) ಈಗ ರಜಾಕಾಲದ ಮತ್ತೊಂದು ಚಟುವಟಿಕೆ ಬಗ್ಗೆ ಈಗ ತಿಳಿಯೋಣ.
ಸ್ಟೆನ್ಸಿಲ್‌ಗಳನ್ನು ಬಳಸಿ ಚಿತ್ರ ರಚನೆ
ಬಹಳ ಸುಲಭವಾದ ಚಟುವಟಿಕೆ ಇದು: ಚಿತ್ರರಚನೆ ಕಲಿಯದೇ ಸ್ಟೆನ್ಸಿಲ್‌ಗಳ ಸಹಾಯದಿಂದ ಚಿತ್ರ ಮೂಡಿಸುವ ಚಟುವಟಿಕೆ. ಇದಕ್ಕೆ ವಿವಿಧ ವಿನ್ಯಾಸಗಳ ಮತ್ತು ಪಕ್ಷಿ/ ಪ್ರಾಣಿಗಳ ಆಕಾರದ ಸ್ಟೆನ್ಸಿಲ್‌ಗಳು ಅಗತ್ಯ. ಸ್ಟೇಷನರಿ ಮಳಿಗೆಗಳಲ್ಲಿ ಇವು ಸಿಗುತ್ತವೆ.
ಉದಾಹರಣೆ 1: “ನೃತ್ಯಗಾರರು" ಎಂಬ ವರ್ಲಿ ಚಿತ್ರಕಲೆಯ ವಿನ್ಯಾಸ. ಅಳತೆ: 10 ಸೆಮೀ ೱ 10 ಸೆ.ಮೀ ಪ್ಲಾಸ್ಟಿಕ್ ತುಂಡು. ಇದರ ಮೇಲ್ಬದಿ ಎಡ ಮೂಲೆಯಲ್ಲಿ ಅರೆ-ಸೂರ್ಯನ ಚಿತ್ರ; ಅದಕ್ಕೆ ವಿರುದ್ಧವಾಗಿ ಕಂಸಾಕಾರದ ಮೂರು ಸಾಲುಗಳಲ್ಲಿ ನೃತ್ಯಗಾರರ ವಿನ್ಯಾಸಗಳು. ಇದರ ಕ್ರಮಸಂಖ್ಯೆ: ಎಲ್‌ಬಿಎಸ್‌ಸಿ 54330. ಬೆಲೆ: ರೂ.129/-
ಲಿಟಲ್ ಬರ್ಡಿ ಬ್ರ್ಯಾಂಡಿನ ಇಂತಹ ಹಲವಾರು ವಿನ್ಯಾಸಗಳು ಲಭ್ಯ. ಇದನ್ನು ಮಾರಾಟ ಮಾಡುವ ಕಂಪೆನಿ: ಎಇಸಿ ಆಫ್- ಶೋರ್ ಟ್ರೇಡಿಂಗ್ ಪ್ರೈ.ಲಿ. ಅಂಚೆ ಪೆಟ್ಟಿಗೆ ಸಂಖ್ಯೆ: 11101 ಫೋನ್: 080-42124379
ರಜಾಕಾಲದಲ್ಲಿ ಸಾಮಾನ್ಯವಾಗಿ ಕೈಗೆತ್ತಿಕೊಳ್ಳುವ ಹತ್ತುಹಲವು ಚಟುವಟಿಕೆಗಳ ಬಗ್ಗೆ ಈ ಸರಣಿಯ ಮೊದಲ ಬರಹದಲ್ಲಿ ಪ್ರಸ್ತಾಪಿಸಿದ್ದೆ. ಅವುಗಳ ಜೊತೆಗೆ ಚದುರಂಗ, ಚೆನ್ನಮಣೆ, ಇಸ್ಪೀಟ್ ಆಟಗಳು ಇಂತಹ ಒಳಾಂಗಣದ ಆಟಗಳನ್ನೂ ಕಲಿತು ಆಡಬಹುದು.
ಬೀಜಗಳಿಂದ ಚಿತ್ರಾಕೃತಿಗಳ ರಚನೆ ಎಂಬ ಚಟುವಟಿಕೆಯ ಬಗ್ಗೆ ಮುಂಚಿನ ಬರಹದಲ್ಲಿ ತಿಳಿದುಕೊಂಡಿದ್ದೇವೆ. ಈಗ ಬೇರೊಂದು ಚಟುವಟಿಕೆಯ ಬಗ್ಗೆ ತಿಳಿಯೋಣ.
ಮಂಡಲ ಚಿತ್ರಗಳಿಗೆ ಬಣ್ಣ ತುಂಬುವುದು
ಕಳೆದ ಐದಾರು ವರುಷಗಳಿಂದ “ಮಂಡಲಗಳು" ಎಂಬ ಚಿತ್ರಗಳು ಜನಪ್ರಿಯವಾಗುತ್ತಿವೆ. ಚೌಕ, ಆಯತ, ತ್ರಿಕೋನ, ವೃತ್ತ, ಸರಳ ರೇಖೆ, ವಕ್ರ ರೇಖೆಗಳು - ಇವನ್ನೆಲ್ಲ ಬಳಸಿ ಈ ಚಿತ್ರಗಳನ್ನು ರಚಿಸಲಾಗುತ್ತದೆ. ಹಾಗೆಯೇ, ಸಸ್ಯಗಳು, ಹೂಗಳು, ಹಣ್ಣುಗಳು, ಪಕ್ಷಿಗಳು, ಪ್ರಾಣಿಗಳು, ಕೀಟಗಳ ಆಕಾರಗಳನ್ನು ಅನುಸರಿಸಿ ಮಂಡಲಗಳನ್ನು ಚಿತ್ರಿಸಲಾಗುತ್ತದೆ. ಗಮನಿಸಿ: ಭಾರತದ ಪಾರಂಪರಿಕ "ಮಂಡಲಗಳು" (ಪೂಜಾವಿಧಿಗಳ ಅಂಗವಾಗಿ ಬರೆಯುವ ವಿನ್ಯಾಸಗಳು) ಇವೆಲ್ಲದಕ್ಕೆ ಪ್ರೇರಣೆ.
ಶಾಲೆಕಾಲೇಜುಗಳ ಪಾಠಪರೀಕ್ಷೆಗಳು ಮುಗಿದು ಬೇಸಗೆ ರಜೆ ಆರಂಭವಾಗುತ್ತಿದ್ದಂತೆ ಹಲವರಿಗೆ "ರಜೆಯಲ್ಲಿ ಏನು ಮಾಡುವುದು?" ಎಂಬ ಚಿಂತೆ. ಪ್ರವಾಸ ಹೋಗುವುದು; ಜಾತ್ರೆಗಳಲ್ಲಿ ತಿರುಗಾಡುವುದು; ಬಂಧುಗಳ ಮನೆಗೆ ಹೋಗುವುದು; ಓದುವುದು; ಬರೆಯುವುದು; ಸಂಗೀತ, ಚಿತ್ರಕಲೆ, ನೃತ್ಯ, ಈಜು, ಸಂಗೀತ ಸಾಧನಗಳನ್ನು ನುಡಿಸುವುದು; ಈಜು - ಇವನ್ನು ಕಲಿಯುವುದು ರಜಾಕಾಲಕ್ಕೆ ಸೂಕ್ತವಾದ ಕೆಲವು ಚಟುವಟಿಕೆಗಳು.
ಇವಲ್ಲದೆ ಸರಳವಾದ ಚೇತೋಹಾರಿಯಾದ ಹತ್ತಾರು ಇತರ ಚಟುವಟಿಕೆಗಳೂ ಇವೆ. ಅಂತಹ ಕೆಲವು ಚಟುವಟಿಕೆಗಳ ಬಗ್ಗೆ ತಿಳಿಯೋಣ.
ಬೀಜಗಳಿಂದ ಚಿತ್ರಾಕೃತಿಗಳ ರಚನೆ
ಅಗತ್ಯವಾದ ವಸ್ತುಗಳು: ವಿವಿಧ ಬೀಜಗಳು; ಅಂಟು; ದಪ್ಪ ಕಾಗದ. ವಸಂತ ಕಾಲದಲ್ಲಿ ವಿವಿಧ ಸಸ್ಯಗಳ ಕಾಯಿ/ ಕೋಡು ಒಣಗಿದಾಗ ಅವುಗಳ ಬೀಜಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು.
ವಿಧಾನ: ಬೀಜಗಳನ್ನು 3 - 5 ದಿನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು.
ಅನಂತರ, ಕಾಗದದಲ್ಲಿ ನಮಗೆ ಇಷ್ಟವಾದ ಆಕೃತಿಗಳ ರೇಖಾಚಿತ್ರ ಬಿಡಿಸಬೇಕು.
ಆ ರೇಖಾಚಿತ್ರಗಳನ್ನು ಸೂಕ್ತವಾದ ಅಳತೆಯ ಮತ್ತು ಬಣ್ಣಬಣ್ಣದ ಬೀಜಗಳಿಗೆ ಅಂಟು ಹಾಕಿ ಕಲಾತ್ಮಕವಾಗಿ ತುಂಬಬೇಕು.
ಮುಂಬೈ ಎಂದೊಡನೆ ನೆನಪಾಗುವುದು “ಗೇಟ್ ವೇ ಆಫ್ ಇಂಡಿಯಾ". ಹಾಗೆಯೇ ಅಲ್ಲಿನ ಕೆಂಬಣ್ಣದ ಡಬಲ್-ಡೆಕರ್ ಬಸ್‌ಗಳು. ಯಾಕೆಂದರೆ 1937ರಿಂದ ಅಲ್ಲಿನ ವಾಸಿಗಳಿಗೂ ಪ್ರವಾಸಿಗಳಿಗೂ ಸೇವೆ ಒದಗಿಸುತ್ತಿದ್ದವು ಈ ಬಸ್‌ಗಳು.
ಆದರೆ ಇನ್ನು ಅವು ನೆನಪು ಮಾತ್ರ. ಯಾಕೆಂದರೆ, ನಾನ್-ಎಸಿ (ಹವಾನಿಯಂತ್ರಿತವಲ್ಲದ) ಡಬಲ್-ಡೆಕರ್ ಬಸ್ 15 ಸಪ್ಟಂಬರ್ 2023ರಂದು ರಾತ್ರಿ 9.30 ಗಂಟೆಗೆ ತನ್ನ ಕೊನೆಯ ಟ್ರಿಪ್ ಮುಗಿಸಿ ಯಾನ ನಿಲ್ಲಿಸಿತು. 1990ರ ದಶಕದ ಆರಂಭದಲ್ಲಿ 900 ಡಬಲ್-ಡೆಕರ್ ಬಸ್‌ಗಳು ಮುಂಬೈಯಲ್ಲಿ ಸಂಚರಿಸುತ್ತಿದ್ದವು ಎಂಬುದಿನ್ನು ಚರಿತ್ರೆ.
ಕೊನೆಯ ದಿನ ಆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಬೆಸ್ಟ್ (ಬೃಹನ್ಮುಂಬಯಿ ಇಲೆಕ್ಟ್ರಿಸಿಟಿ ಸಪ್ಲೈ ಆಂಡ್ ಟ್ರಾನ್ಸ್-ಪೋರ್ಟ್) ಬಸ್ ಕಂಡಕ್ಟರ್ ಗೋಪಾಲ್ ಸುಕ್ಟೆ ನೀಡುತ್ತಿದ್ದ ಸೂಚನೆ: “ಇವತ್ತು ಈ ಬಸ್ಸಿನ ಕೊನೆಯ ದಿನ. ಹಾಗಾಗಿ ಪ್ರತಿಯೊಬ್ಬರೂ ಹಳೆಯ ಟೈಪಿನ ಟಿಕೆಟ್ ತಗೊಳ್ಳಿ - ಇವತ್ತಿನ ನಿಮ್ಮ ಪ್ರಯಾಣ ನೆನಪಿನಲ್ಲಿ ಉಳಿಯಲಿಕ್ಕಾಗಿ."
ಭಾರತದ ಚದುರಂಗ ಪಟುಗಳು ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದರೆ, ಇದು ಕೇರಳದ ಗ್ರಾಮವೊಂದರಲ್ಲಿ ಸಾಮಾಜಿಕ ಬದಲಾವಣೆ ತಂದ ಚದುರಂಗದ ಕತೆ.
ಆ ಗ್ರಾಮದ ಹೆಸರು ಮರೊಟ್ಟಿಚಾಲ್. 1960ರ ದಶಕದಲ್ಲಿ ಅಲ್ಲಿ ಹಲವಾರು ಕುಟುಂಬಗಳಲ್ಲಿ ಸಂಕಟ ತುಂಬಿತ್ತು. ಅದಕ್ಕೆ ಕಾರಣ ಕುಡಿತದ ಚಟ. ಇದು ಹಲವಾರು ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗಿತ್ತು. ಆ ಸಮಯದಲ್ಲಿ ಅಲ್ಲಿನ ಟೀ-ಶಾಪ್ ಮಾಲೀಕ ಸಿ. ಉನ್ನಿಕೃಷ್ಣನ್ ಇವೆಲ್ಲ ಸಮಸ್ಯೆಗಳಿಂದ ಪಾರಾಗಲು ಜನರಿಗೊಂದು ದಾರಿ ತೋರಿಸಿದರು. ಅದುವೇ ಚದುರಂಗದ ಆಟ.
ಹಳ್ಳಿಗರ ಉದ್ಧಾರಕ್ಕಾಗಿ ಏನಾದರೂ ಮಾಡಬೇಕೆಂದು ಪಣ ತೊಟ್ಟ ಉನ್ನಿಕೃಷ್ಣನ್ ಮಾಡಿದ್ದು ಇಷ್ಟೇ: ಹಳ್ಳಿಗರಿಗೆ ಚದುರಂಗ ಕಲಿಸತೊಡಗಿದರು. ಭಾರತದ ಈ ಪ್ರಾಚೀನ ಆಟ ಆ ಹಳ್ಳಿಯಲ್ಲಿ ಮ್ಯಾಜಿಕ್ ಮಾಡಿತು! ಮದ್ಯ ಕುಡಿದು “ಥ್ರಿಲ್" ಪಡೆಯುವ ಬದಲಾಗಿ ತಮ್ಮ ಬುದ್ಧಿಮತ್ತೆಗೆ ಸವಾಲೊಡ್ಡುವ ಚದುರಂಗ ಆಟವಾಡಿ ಹೆಚ್ಚೆಚ್ಚು ಹಳ್ಳಿಗರು “ಥ್ರಿಲ್" ಪಡೆಯತೊಡಗಿದರು! ಹೆಚ್ಚೆಚ್ಚು ಜನರಿಗೆ ಚದುರಂಗದ ಚಟ ಹಿಡಿದಂತೆ, ಆ ಗ್ರಾಮದಲ್ಲಿ ಕುಡಿತದ ಚಟ ಕಡಿಮೆಯಾಯಿತು.
ಚದುರಂಗದ ಆಟದಲ್ಲಿ ಪ್ರಬಲ ಎದುರಾಳಿಯನ್ನು ಸೋಲಿಸುವುದು ಮರೊಟ್ಟಿಚಾಲ್‌ನ ಹಳ್ಳಿಗರಿಗೆ ಪ್ರತಿಷ್ಠೆಯ ಸಂಗತಿ ಆಯಿತು. ಒಂದೊಮ್ಮೆ ಕುಡಿತದಿಂದಾಗಿ ಛಿದ್ರವಾಗಿದ್ದ ಕುಟುಂಬದ ಸದಸ್ಯರೆಲ್ಲ ಈಗ ಒಟ್ಟಾಗಿ ಕುಳಿತು ಚದುರಂಗದ ಆಟವಾಡತೊಡಗಿದರು!
ಐದು ದಶಕಗಳ ಬ್ಯಾಂಕಿಂಗ್ ಸೇವೆಯಲ್ಲಿ ಬ್ಯಾಂಕಿಂಗ್ ದಿಗ್ಗಜನಾಗಿ ಬೆಳೆದು, ಕರ್ನಾಟಕ ಬ್ಯಾಂಕ್‌ನ ಚೇರ್ಮನ್ ಆಗಿ ನಿವೃತ್ತರಾದ ಪೊಳಲಿ ಜಯರಾಮ ಭಟ್ 9 ಆಗಸ್ಟ್ 2023ರಂದು ಹೃದಯಾಘಾತದಿಂದ ನಮ್ಮನ್ನಗಲಿದರು.
ರಾಜ ಪುರೋಹಿತ ಪೊಳಲಿ ದಿ. ದೊಡ್ಡ ವಾಸುದೇವ ಭಟ್ಟರ ಏಳು ಮಕ್ಕಳಲ್ಲಿ ಐದನೆಯವರಾದ ಜಯರಾಮ ಭಟ್ ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಪೊಳಲಿಯಲ್ಲಿ 14 ನವಂಬರ್ 1951ರಂದು. ಬದುಕಿನುದ್ದಕ್ಕೂ ಪೌರೋಹಿತ ಪರಂಪರೆಯ ಮೌಲ್ಯಗಳನ್ನು ಅನುಸರಿಸಿದವರು. ಬಾಲ್ಯದ ಬಡತನದ ಎಲ್ಲ ಕಷ್ಟಕಾರ್ಪಣ್ಯಗಳನ್ನು ಎದುರಿಸುತ್ತಾ, ಬೆಳೆದವರು. ಪೊಳಲಿ ವಿದ್ಯಾವಿಲಾಸ ಪ್ರಾಥಮಿಕ ಶಾಲೆಯಲ್ಲಿ ಅವರ ಆರಂಭಿಕ ವಿದ್ಯಾಭ್ಯಾಸ. ಅನಂತರ 4 ಮೈಲು ದೂರದ ಗುರುಪುರ ಬೋರ್ಡ್ ಹೈಸ್ಕೂಲಿಗೆ ಪ್ರತಿದಿನವೂ ಬರಿಗಾಲಿನಲ್ಲೇ ನಡೆದು ಹೋಗಿ ಬರುತ್ತಾ ಹೈಸ್ಕೂಲು ಕಲಿಕೆ. ತದನಂತರ ಬಾಡಿಗೆ ಕೋಣೆಯಲ್ಲಿ ವಾಸ ಮಾಡುತ್ತಾ ಮಂಗಳೂರಿನ ಸೈಂಟ್ ಎಲೋಸಿಯಸ್ ಕಾಲೇಜಿನಲ್ಲಿ ಪಿ.ಯು.ಸಿ. ಹಾಗೂ ಬಿ.ಎಸ್ಸಿ. ಪದವಿ ಶಿಕ್ಷಣ. ನಂತರ ಮೈಸೂರು ವಿಶ್ವವಿದ್ಯಾಲಯದಿಂದ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು.
ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯೊಂದಿಗೆ ಥಳಕು ಹಾಕಿಕೊಂಡಿದೆ “ಸುಲೇಖ” ಶಾಯಿಯ ಸುಮಾರು ಒಂದು ನೂರು ವರುಷದ ಚರಿತ್ರೆ.
1930ರ ಹೊತ್ತಿಗೆ ಸ್ವಾತಂತ್ರ್ಯ ಹೋರಾಟದ ಅಂಗವಾದ ಸ್ವದೇಶಿ ಚಳವಳ ಉತ್ತುಂಗದಲ್ಲಿತ್ತು. ಭಾರತೀಯರು ಎಲ್ಲ ವಿದೇಶಿ ವಸ್ತುಗಳನ್ನು ಬಹಿಷ್ಕರಿಸುತ್ತಿದ್ದರು. ಆ ಸಂದರ್ಭದಲ್ಲಿ, ಮಹಾತ್ಮಾ ಗಾಂಧಿ ಅವರಿಗೊಂದು ಇಕ್ಕಟ್ಟು ಎದುರಾಯಿತು. ಆಗ ಯಾವುದೇ ಸ್ವದೇಶಿ ಶಾಯಿ ಉತ್ಪಾದನೆ ಆಗುತ್ತಿರಲಿಲ್ಲ. ಎಲ್ಲ ಬರವಣಿಗೆಗೂ ವಿದೇಶಿ ಶಾಯಿ ಬಳಕೆಯಾಗುತ್ತಿತ್ತು. ಅದನ್ನೇ ಬಳಸಿ, "ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ” ಎಂದು ದೇಶವಾಸಿಗಳಿಗೆ ಕರೆನೀಡುವ ಬರಹ ಬರೆಯುವುದು ವಿಪರ್ಯಾಸ ಎಂದು ಅವರಿಗನಿಸಿತು.
ಆದ್ದರಿಂದ ಸತೀಶ್ ಚಂದ್ರ ದಾಸ್‌ಗುಪ್ತ ಅವರನ್ನು ಗಾಂಧೀಜಿ ಸಂಪರ್ಕಿಸಿ, ಸ್ವದೇಶಿ ಶಾಯಿ ಉತ್ಪಾದಿಸಲು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು. ಕ್ರಾಂತಿಕಾರಿ ಸ್ವಾತ್ರಂತ್ರ್ಯ ಆಂದೋಲನದಲ್ಲಿ ಸಕ್ರಿಯರಾಗಿದ್ದ ದಾಸ್‌ಗುಪ್ತ ಅವರಿಗೆ ಬೆಂಗಾಲ್ ಕೆಮಿಕಲ್ಸ್ ಜೊತೆ ಸಂಬಂಧವಿತ್ತು. ಅವರು ಹಿಂದೊಮ್ಮೆ “ಕೃಷ್ಣ ಧಾರಾ” ಹೆಸರಿನ ಶಾಯಿ ತಯಾರಿಸಿದ್ದರು.
