ಕೊರೊನಾ ವೈರಸ್ ಧಾಳಿಯಿಂದಾಗಿ ಮಾರ್ಚ್ ೨೦೨೦ರಿಂದ ತೊಡಗಿ ಜಗತ್ತಿನಲ್ಲೆಲ್ಲ ಅಲ್ಲೋಲಕಲ್ಲೋಲ. ಭಾರತದಲ್ಲೇ ೫೦ ಲಕ್ಷಕ್ಕಿಂತ ಅಧಿಕ ಜನರಿಗೆ ಈ ವರೆಗೆ ಇದರ ಸೋಂಕು ತಗಲಿದೆ. ಇಂತಹ ಪರಿಸ್ಥಿತಿಯಲ್ಲಿ, ನಗರಗಳಿಂದ ನೂರಾರು ಕಿಲೋಮೀಟರುಗಳ ದೂರದಲ್ಲಿ, ದಟ್ಟ ಕಾಡುಗಳ ಒಳಗೆ ಶತಮಾನಗಳಿಂದ ವಾಸ ಮಾಡುತ್ತಿರುವ ಆದಿ ಬುಡಕಟ್ಟುಗಳಿಗೆ ದೊಡ್ಡ ಅಪಾಯವಿದೆ. ಯಾಕೆಂದರೆ, ನಗರವಾಸಿಗಳನ್ನು ಬಾಧಿಸುವ ಯಾವುದೇ ರೋಗಗಳಿಂದ ಅವರು ಈ ವರೆಗೆ ಮುಕ್ತರಾಗಿದ್ದರು. ಹಾಗಾಗಿ, ಇಂತಹ ಯಾವುದೇ ರೋಗಗಳ ನಿರೋಧ ಶಕ್ತಿ ಬುಡಕಟ್ಟಿನವರಲ್ಲಿ ಇಲ್ಲವೆಂದೇ ಹೇಳಬಹುದು.
ಭಾರತದ ಆದಿ ಬುಡಕಟ್ಟುಗಳಲ್ಲೊಂದು ಚೆಂಚು. ಈ ಬುಡಕಟ್ಟಿನವರು ಬೇಟೆಯಾಡಿ, ತೊರೆ-ನದಿಗಳಲ್ಲಿ ಮೀನು ಹಿಡಿದು ಬದುಕುವವರು. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಪೂರ್ವ ಘಟ್ಟ ವಲಯದ ನಲ್ಲಮಾಲ ಗುಡ್ಡಗಳಲ್ಲಿ ೯,೦೦೦ ಚದರ ಕಿಮೀ ಪ್ರದೇಶದಲ್ಲಿ ವ್ಯಾಪಿಸಿರುವ ದಟ್ಟ ಕಾಡುಗಳಲ್ಲಿ ಇವರ ವಾಸ.
ಆ ದಿನ ಮಂಗಳೂರಿನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಸೇರಿದ್ದೆ - ಚಿಕ್ಕಮಗಳೂರಿಗೆ ಪ್ರಯಾಣಿಸಲಿಕ್ಕಾಗಿ. ನಮ್ಮ ಬಸ್ ಉಜಿರೆ ತಲಪಿದಾಗ ಇಬ್ಬರು ಬಸ್ಸೇರಿ ನನ್ನ ಹಿಂದಿನ ಸೀಟಿನಲ್ಲಿ ಕುಳಿತರು. ಅವರ ಪಕ್ಕದಲ್ಲಿ ಕುಳ್ಳ ವ್ಯಕ್ತಿಯೊಬ್ಬ ಆಸೀನನಾದ.
ಬಸ್ ಉಜಿರೆಯಿಂದ ಹೊರಟಾಗ ಆ ಇಬ್ಬರು ಮಾತಿಗೆ ಶುರುವಿಟ್ಟರು. ಚಾರ್ಮಾಡಿ ಘಾಟಿ ಏರಲು ಬಸ್ ಏದುಸಿರು ಬಿಡುತ್ತಿದ್ದಂತೆ, ಇವರಿಬ್ಬರ ಮಾತು ಜೋರುಜೋರಾಯಿತು. ಅದರಿಂದಾಗಿ ಎಲ್ಲ ಸಹಪ್ರಯಾಣಿಕರಿಗೆ ಕಿರಿಕಿರಿ. ಘಾಟಿ ಏರಿದ ಬಸ್ ಕೊಟ್ಟಿಗೆಹಾರ ಹಾದು, ಬಣಕಲ್ ತಲಪಿತು. ಅಲ್ಲಿಂದ ಬಸ್ ಹೊರಟಾಗಲೂ ತಡೆಬಡೆಯಿಲ್ಲದೆ ಸಾಗಿತ್ತು ಅವರು ಮಾತು. ಆ ತನಕ ಅವರಿಬ್ಬರ ಅಬ್ಬರದ ಮಾತುಕತೆ ಸಹಿಸಿಕೊಂಡಿದ್ದ ಕುಳ್ಳ ಕೊನೆಗೂ ಹೇಳಿಯೇ ಬಿಟ್ಟ. “ಎಷ್ಟು ಮಾತಾಡ್ತೀರಿ ಮಾರಾಯರೇ! ಸ್ವಲ್ಪ ಸುಮ್ಮನಿರಲಿಕ್ಕೆ ಆಗೋದಿಲ್ವಾ? ನನ್ನ ಕಿವಿ ತೂತು ಬಿದ್ದು ಹೋಯಿತು!”
ಈ ಅನಿರೀಕ್ಷಿತ ಪ್ರತಿಕ್ರಿಯೆಯಿಂದಾಗಿ ಅವರಿಬ್ಬರು ಪೆಚ್ಚಾದರು. ತಕ್ಷಣ ಏನು ಹೇಳಬೇಕೆಂದು ತಿಳಿಯದೆ ಮಿಕಿಮಿಕಿ ಕಣ್ ಬಿಟ್ಟರು. ಅಕ್ಕಪಕ್ಕದ ಸೀಟಿನವರೆಲ್ಲ ಅವರಿಬ್ಬರನ್ನೂ ಕುಳ್ಳನನ್ನೂ ನೋಡುತ್ತಿದ್ದರು. ಎಲ್ಲರ ಮುಖದಲ್ಲಿಯೂ ಕುಳ್ಳನ ನೇರ ಮಾತಿಗೆ ಮೆಚ್ಚುಗೆ. ಮುಜುಗರ ತಡೆಯಲಾಗದೆ, ಅವರಲ್ಲೊಬ್ಬ ಕುಳ್ಳನತ್ತ ಮಾತಿನ ಬಾಣವನ್ನೆಸೆದ, "ನಮ್ಮ ಮಾತಿನಿಂದ ನಿಮಗೇನೂ ತೊಂದರೆ ಆಗಿಲ್ಲವಲ್ಲ. ನೀವು ಗಡದ್ದು ನಿದ್ದೆ ಮಾಡಿದ್ದೀರಲ್ಲಾ!"
ಪ್ರತಿ ವರುಷ ನವಂಬರ್ ತಿಂಗಳು ಕನ್ನಡಿಗರಿಗೆ ಕನ್ನಡ ಹಬ್ಬ. ಕನ್ನಡದಲ್ಲಿ ಏನಾದರೂ ಬರೆಯುವುದು ಕೂಡ ಕನ್ನಡ ಹಬ್ಬದ ಸಂಭ್ರಮಾಚರಣೆ, ಅಲ್ಲವೇ?
"ಲೇಖನ ಬರೆಯಿರಿ” ಎಂದಾಗ “ಯಾವುದರ ಬಗ್ಗೆ ಬರೆಯಲಿ?” ಎಂಬುದು ಹಲವರು ಕೇಳುವ ಪ್ರಶ್ನೆ. ಒಮ್ಮೆ ಸುತ್ತಮುತ್ತ ಕಣ್ಣು ಹಾಯಿಸಿದರೆ ಸಾಕು; ಲೇಖನಕ್ಕೆ ಹೂರಣ ಆಗಬಹುದಾದ ನೂರಾರು ವಿಷಯಗಳು ನಿಮಗೇ ಕಾಣಿಸುತ್ತವೆ.
ಲೇಖನಕ್ಕಾಗಿ ವಿಷಯ ಗುರುತಿಸುವ ಮೊದಲ ಹೆಜ್ಜೆ ಅವಲೋಕನ. ಅಂದರೆ ಗಮನವಿಟ್ಟು ನೋಡುವುದು. ಉದಾಹರಣೆಗೆ ಬಸ್ಸಿನಲ್ಲಿ, ರೈಲಿನಲ್ಲಿ ಅಥವಾ ವಿಮಾನದಲ್ಲಿ ಪ್ರಯಾಣಿಸುವಾಗ ಹಲವರು ನಿದ್ದೆ ಮಾಡುತ್ತಾರೆ. ಅದರ ಬದಲಾಗಿ, ನಮ್ಮ ಸುತ್ತಲು ಏನಾಗುತ್ತಿದೆ ಎಂದು ಗಮನಿಸಿದರೆ ಹಲವು ಸಂಗತಿಗಳು ತೆರೆದುಕೊಳ್ಳುತ್ತವೆ. ಹೀಗೆ ಗಮನಿಸಿದ್ದರಿಂದ ಬಸ್ ಪ್ರಯಾಣದಲ್ಲಿ ಕಣ್ಣಾರೆ ಕಂಡ ಸಂಗತಿಗಳ ಬಗ್ಗೆಯೇ ಮೂರು ಲೇಖನಗಳನ್ನು ಬರೆಯಲು ನನಗೆ ಸಾಧ್ಯವಾಯಿತು. (ಸದ್ಯದಲ್ಲೇ “ಬಸ್ ಪ್ರಯಾಣ ಪ್ರಸಂಗ” ಎಂಬ ಲೇಖನವನ್ನು “ಸಂಪದ"ದಲ್ಲಿ ಪ್ರಕಟಿಸಲಿದ್ದೇನೆ. ನೀವು ಓದಬಹುದು.)
ಮನೆಯ ಸುತ್ತಮುತ್ತ ೨೨ ಸುಳಿವು
ಮೊನ್ನೆ, ೨ ಅಕ್ಟೋಬರ್ ೨೦೨೦ರಂದು, ಮಹಾತ್ಮಾ ಗಾಂಧಿಯವರ ೧೫೧ನೇ ಜನ್ಮದಿನದಂದು ಅವರಿಗೆ ನಮ್ಮ ದೇಶವಾಸಿಗಳಿಂದ ಗೌರವಾರ್ಪಣೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಮಹಾನ್ ಲೇಖಕರೂ ಆಗಿದ್ದರು. ಅವರು ಬರೆದದ್ದು ಸುಮಾರು ೧೦೦ ಸಂಪುಟಗಳ “ಕಲೆಕ್ಟೆಡ್ ವರ್ಕ್ಸ್ ಆಫ್ ಮಹಾತ್ಮಾ ಗಾಂಧಿ” ಎಂಬ ಪುಸ್ತಕ ಸರಣಿಗೆ ಸಾಕಾಗುವಷ್ಟಿತ್ತು!
ತಮ್ಮ ಬಿಡುವಿಲ್ಲದ ಕೆಲಸಕಾರ್ಯಗಳ ನಡುವೆ ಇಷ್ಟೊಂದು ಬರೆಯಲು ಅವರಿಗೆ ಹೇಗೆ ಸಾಧ್ಯವಾಯಿತು ಎಂಬುದೊಂದು ವಿಸ್ಮಯ. ಅವರು ಯಾಕೆ ಇಷ್ಟೆಲ್ಲ ಬರೆದರು ಎಂಬ ಪ್ರಶ್ನೆಯೂ ಮುಖ್ಯವಾಗುತ್ತದೆ.
ಅವರ ಈ ಎರಡು ಪುಸ್ತಕಗಳನ್ನು ಪರಿಶೀಲಿಸಿದರೆ, ಆ ಪ್ರಶ್ನೆಗೆ ಉತ್ತರ ಸಿಗಬಹುದು: “ಹಿಂದ್ ಸ್ವರಾಜ್” (ಇಂಗ್ಲಿಷಿನಲ್ಲಿ “ಇಂಡಿಯನ್ ಹೋಮ್ ರೂಲ್”) ಮತ್ತು ಅವರ “ಆತ್ಮಕತೆ”. ತನ್ನ “ಆತ್ಮಕತೆ"ಗೆ ಅವರು “ಆತ್ಮಕತೆ ಅಥವಾ ಸತ್ಯದೊಂದಿಗೆ ನನ್ನ ಪ್ರಯೋಗಗಳು” ಎಂದು ಶೀರ್ಷಿಕೆ ನೀಡಿರುವುದು ಗಮನಾರ್ಹ.
೧೯ ಸಪ್ಟಂಬರ್ ೨೦೨೦ರಂದು “ಐಎನ್‌ಎಸ್ ವಿರಾಟ್” ಯುದ್ಧನೌಕೆ ಮುಂಬೈಯಿಂದ ಗುಜರಾತಿನ ಅಲಾಂಗಿಗೆ ತನ್ನ ಕೊನೆಯ ಸಮುದ್ರಯಾನ ಆರಂಭಿಸಿತು. ಭಾರತದ ಹೆಮ್ಮೆಯ ವಿಮಾನವಾಹಕ ಯುದ್ಧನೌಕೆಯಾಗಿದ್ದ ಐಎನ್‌ಎಸ್ ವಿರಾಟ್ ಮುಂಬೈ ಹಡಗುಕಟ್ಟೆಯಿಂದ ಹೊರಟಾಗ ಭಾರತದ ನೌಕಾಸೇನೆಯ ಅಧಿಕಾರಿಗಳು ಭಾವುಕ ವಿದಾಯ ಸಲ್ಲಿಸಿದರು.
ಐಎನ್‌ಎಸ್ ವಿರಾಟ್ ಭಾರತದ ನೌಕಾಸೇನೆಯ ಯುದ್ಧನೌಕೆಯಾಗಿ ೨೯ ವರುಷ (೧೯೮೭ರಿಂದ ೨೦೧೭ ವರೆಗೆ) ಮತ್ತು ಎಚ್‌ಎಮ್‌ಎಸ್ ಹರ್ಮಿಸ್ ಹೆಸರಿನಲ್ಲಿ ಬ್ರಿಟಿಷ್ ರಾಯಲ್ ನೌಕಾಸೇನೆಯ ಯುದ್ಧನೌಕೆಯಾಗಿ ೨೭ ವರುಷ (೧೯೫೯ರಿಂದ ೧೯೮೪ ವರೆಗೆ) ಸೇವೆ ಸಲ್ಲಿಸಿದೆ. ೧೯೮೬ರಲ್ಲಿ ಇದನ್ನು ಭಾರತಕ್ಕೆ ೬೫ ದಶಲಕ್ಷ ಡಾಲರುಗಳಿಗೆ ಬ್ರಿಟನ್ ಮಾರಾಟ ಮಾಡಿತು. ನಂತರ ನವೀಕೃತಗೊಂಡು, ಇದು ಭಾರತೀಯ ನೌಕಾಸೇನೆಗೆ ಸೇರ್ಪಡೆಗೊಂಡಿತು. ತದನಂತರ ೨೦೧೭ರಲ್ಲಿ ಇದನ್ನು ನೌಕಾಸೇನೆಯಿಂದ "ನಿವೃತ್ತಿ"ಗೊಳಿಸಲಾಯಿತು. ಹೀಗೆ ೫೬ ವರುಷಗಳ ದೀರ್ಘ ಕಾಲ ಎರಡು ನೌಕಾಸೇನೆಗಳ ಪ್ರಧಾನ ವಿಮಾನವಾಹಕ ಯುದ್ಧನೌಕೆಯಾಗಿದ್ದ ಐಎನ್‌ಎಸ್ ವಿರಾಟ್, “ನೌಕಾಸೇನೆಯಲ್ಲಿ ಅತ್ಯಂತ ದೀರ್ಘ ಕಾಲ ಸೇವೆ ಸಲ್ಲಿಸಿದ ಯುದ್ಧನೌಕೆ” ಎಂಬ ಗಿನ್ನೆಸ್ ಜಾಗತಿಕ ದಾಖಲೆ ಹೊಂದಿದೆ.
"ನಮ್ಮ ತೋಟದಲ್ಲಿ ಮೊದಲ ಬೋರ್-ವೆಲ್ ಮಾಡಿದ್ದು ೧೯೭೯ರಲ್ಲಿ. ಆಗ ೮೦ ಅಡಿ ಆಳದಲ್ಲಿ ನೀರು ಸಿಕ್ಕಿತ್ತು. ಈ ವರುಷ ನಮ್ಮ ಹಳ್ಳಿಯಲ್ಲಿ ಬೋರ್-ವೆಲ್ ಮಾಡಿಸಿದವರಿಗೆ ನೀರು ಸಿಕ್ಕಿದ್ದು ಮುನ್ನೂರು ಅಡಿ ಆಳದಲ್ಲಿ. ಕೆಲವರು ೩೫೦ ಅಡಿ ಆಳದ ವರೆಗೂ ಕೊರೆಸಬೇಕಾಯಿತು. ೨೫ ವರ್ಷಗಳಲ್ಲಿ ಜಲಮಟ್ಟ ಇಷ್ಟು ಕೆಳಗೆ ಹೋಗಿದೆ. ನಾವೆಲ್ಲ ಮಳೆನೀರು ಇಂಗಿಸಲೇ ಬೇಕು. ಇಲ್ಲದಿದ್ರೆ ನಮ್ಮ ಮಕ್ಕಳ ಕಾಲದಲ್ಲಿ ಅಲ್ಲ, ನಮ್ಮ ಕಾಲದಲ್ಲಿಯೇ ಕುಡಿಯಲಿಕ್ಕೆ ನೀರಿಲ್ಲ ಅಂತಾದೀತು" ಎಂದು ಹೇಳುತ್ತಾ ಗುಡ್ಡ ಏರುತ್ತಿದ್ದರು ಮಂಚಿ ಶ್ರೀನಿವಾಸ ಆಚಾರ್.
ಅವರ ಮಾತು ಕೇಳುತ್ತಿದ್ದಂತೆ ಚಿತ್ರವೊಂದು ಕಣ್ಣಿಗೆ ಕಟ್ಟುತ್ತಿತ್ತು. ಹಿಂದಿನ ತಲೆಮಾರುಗಳು ಉಳಿಸಿಟ್ಟ ಅಂತರ್ಜಲವನ್ನು ಇಂದಿನ ತಲೆಮಾರು ದೋಚುತ್ತ ದೋಚುತ್ತ ಮುಂದಿನ ತಲೆಮಾರುಗಳಿಗೆ ನೀರ ಸಂಕಟ ಉಳಿಸಿ ಹೋಗುವ ಚಿತ್ರ.
ಕೇವಲ ಮಾತನಾಡುತ್ತ ಇರುವವರಲ್ಲ ಶ್ರೀನಿವಾಸ ಆಚಾರ್. ೮ಎಪ್ರಿಲ್ ೨೦೦೫ರಂದು ಅವರ ಮನೆಗೆ ಹೋಗಿದ್ದಾಗ, ನೀರಿಂಗಿಸಲಿಕ್ಕಾಗಿ ಅವರು ಮಾಡಿದ ಕೆಲಸ ಅಂಗಳದಲ್ಲೇ ಕಾಣುತ್ತಿತ್ತು. ಮನೆಯ ಚಾವಣಿ ನೀರನ್ನೆಲ್ಲ ಸಂಗ್ರಹಿಸಲು ಮನೆಯಿಂದ ಮೂವತ್ತು ಅಡಿಗಳ ದೂರದಲ್ಲಿ ೨೦ ಅಡಿ ಉದ್ದದ ಇಂಗುಗುಂಡಿ. ಅರ್ಧ ಎಕರೆ ವಿಶಾಲವಾದ ಅಂಗಳದ ಮೂಲೆಯಲ್ಲಿ ಇನ್ನೆರಡು ಅದೇ ಅಳತೆಯ ಇಂಗುಗುಂಡಿಗಳು.
"ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ" ಎಂಬ ಮಹಾತ್ಮಾ ಗಾಂಧಿಯವರ ಘೋಷಣೆ, ೮ ಆಗಸ್ಟ್ ೧೯೪೨ರಂದು ಭಾರತದ ಉದ್ದಗಲದಲ್ಲಿ ವಿದ್ಯುತ್ ಸಂಚಾರ ಮೂಡಿಸಿತು. ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಲೇ ಬೇಕೆಂದು ಕೋಟಿಗಟ್ಟಲೆ ಭಾರತೀಯರು ಸಂಕಲ್ಪ ತೊಡಲು ಅದು ಕಾರಣವಾಯಿತು.
ಅಲ್ಲಿಯ ವರೆಗೆ, ಭಾರತೀಯರಿಗೆ ಆಡಳಿತದಲ್ಲಿ ಭಾಗಶಃ ಸ್ವಾತಂತ್ರ್ಯ ನೀಡುವ ಪ್ರಸ್ತಾಪಗಳನ್ನು ಚರ್ಚಿಸಲಾಗುತ್ತಿತ್ತು. ಆದರೆ, “ಕ್ವಿಟ್ ಇಂಡಿಯಾ" ಅಥವಾ “ಭಾರತ್ ಛೋಡೋ” ಆಂದೋಲನ ಭಾರತೀಯರಿಗೆ ಬೇಕಾದ್ದು ಸಂಪೂರ್ಣ ಸ್ವಾತಂತ್ರ್ಯ ಎಂಬುದನ್ನು ಇಡೀ ಜಗತ್ತಿಗೆ ಘೋಷಿಸಿ, ೧೫ ಆಗಸ್ಟ್ ೧೯೪೭ರಂದು ಭಾರತ ಸ್ವತಂತ್ರವಾಗಲು ಕಾರಣವಾಯಿತು.
"ಸಂಪೂರ್ಣ ಸ್ವರಾಜ್ಯ”ದ ಪರಿಕಲ್ಪನೆಯನ್ನು ೧೯೨೧ರಲ್ಲೇ ಅಖಿಲ ಭಾರತ ಕಾಂಗ್ರೆಸ್ ವೇದಿಕೆಯಲ್ಲಿ ಕಾಂಗ್ರೆಸ್ ನಾಯಕ ಹಸ್‌ರತ್ ಮೊಹಾನಿ ಪ್ರಸ್ತಾಪಿಸಿದ್ದರು. ಈ ಬಗ್ಗೆ ೧೯ ಡಿಸೆಂಬರ್ ೧೯೨೯ರಂದು ಠರಾವನ್ನೂ ಅನುಮೋದಿಸಲಾಗಿತ್ತು. “ಭಾರತ ಬಿಟ್ಟು ತೊಲಗಿ" ಎಂದು ಘೋಷಿಸಿದಾಕ್ಷಣ ಜನರೆಲ್ಲ ಒಂದಾಗಿ ಎದ್ದು ನಿಂತರು.
ನಮ್ಮ ಗ್ರಾಮೀಣ ಜನರ ಜೀವನಪ್ರೀತಿ ದೊಡ್ಡದು. ಪ್ರಕೃತಿಯನ್ನು ಗಮನಿಸುತ್ತಲೇ ಅವರು ಬದುಕಿದರು. ಪ್ರಕೃತಿಯ ಆಗುಹೋಗುಗಳಿಗೆ ಸ್ಪಂದಿಸುತ್ತ ಚಿತ್ರ ಬರೆದರು; ತಮ್ಮ ನೋವುನಲಿವುಗಳನ್ನು ಹಾಡುಗಳನ್ನಾಗಿಸಿದರು. ಅವರು ಬರೆದ ಚಿತ್ರಗಳು ಅವರ ಮನಸ್ಸಿನ ಭಾವನೆಗಳಿಗೆ ಆಕೃತಿ ಕೊಡುವ ಪ್ರಯತ್ನಗಳು.
ಕರ್ನಾಟಕದ ಮಲೆನಾಡಿನ ಹಳ್ಳಿಗಳಲ್ಲಿ ಹೀಗೆ ಅರಳಿದ ಒಂದು ಕಲೆಯೇ ಹಸೆ ಚಿತ್ತಾರಗಳು. ನೆಲದಲ್ಲಿ ಚಿತ್ರಿಸಿದಾಗ ರಂಗೋಲಿ, ಮನುಷ್ಯರ ಮೈಯಲ್ಲಿ ಮೂಡಿಸಿದಾಗ ಹಚ್ಚೆ, ಗೋಡೆ ಮತ್ತು ಬಾಗಿಲು/ ಕಿಟಕಿಗಳ ಚೌಕಟ್ಟುಗಳ ಅಂಚಿನಲ್ಲಿ ಬಿಡಿಸಿದಾಗ ಚಿತ್ತಾರ ಎಂದು ಈ ವಿನ್ಯಾಸಗಳನ್ನು ಕರೆಯಲಾಯಿತು. ಇವು ಮೂರು ನಮೂನೆಗಳಲ್ಲಿ ಇರುವ ಮೂಲ ವಿನ್ಯಾಸಗಳು ಒಂದೇ ಎಂಬುದು ಗಮನಾರ್ಹ. ಉದಾಹರಣೆಗೆ, ಸೂರ್ಯ, ಚಂದ್ರ, ತೊಂಡೆ ಚಪ್ಪರ, ಗೌರಿ ಮುಡಿ, ಜೋಗಿ ಜಡೆ, ಮುತ್ತಿನ ಆರತಿ, ಮುತ್ತಿನ ಬಟ್ಟು ವಿನ್ಯಾಸಗಳು.
ಕರ್ನಾಟಕದಲ್ಲಿ ರಂಗೋಲಿಯನ್ನು ಹಸೆ ಎಂದೂ ಕರೆಯುತ್ತಾರೆ. ಮನೆಯಲ್ಲಿ ದೇವತಾ ಕಾರ್ಯ, ಮದುವೆ, ಹುಟ್ಟಿದ ಹಬ್ಬ ಇವನ್ನೆಲ್ಲ ಮಾಡುವ ಜಾಗವೇ ಹಸೆ. ಅಲ್ಲಿ ವಿವಿಧ ರೇಖಾ ವಿನ್ಯಾಸಗಳಿರುವ ರಂಗೋಲಿಗಳನ್ನು ಬರೆದು, ಅದರ ಮೇಲೆ ಮರದ ಹಲಗೆಯ ಮಣೆ ಇಟ್ಟು, ಅದರಲ್ಲಿ ದೇವತಾಕಾರ್ಯ ಮಾಡುವುದು ವಾಡಿಕೆ. ಈ ಮಣೆಯೇ ಹಸೆ ಮಣೆ.
ಕಂಪೆನಿ ಸ್ಕೂಲ್ ಚಿತ್ರಕಲೆ
ಬ್ರಿಟಿಷರು ಭಾರತದಲ್ಲಿ ಅಧಿಕಾರ ಸೂತ್ರ ಹಿಡಿದ ನಂತರ ಮಾಡಿದ ಕೆಲಸಗಳಲ್ಲೊಂದು: ಭಾರತದ ಚಿತ್ರಕಾರರ ಮೂಲಕ ಇಲ್ಲಿನ ಸಸ್ಯಗಳು, ಪ್ರಾಣಿಪಕ್ಷಿಗಳು, ವಾಸ್ತು ರಚನೆಗಳು, ಜನರು ಮತ್ತು ಆಚರಣೆಗಳ ಚಿತ್ರಗಳನ್ನು ಬರೆಯಿಸಿ, ಅವನ್ನು ಇಂಗ್ಲೆಂಡಿನ ತಮ್ಮ ಬಂಧುಬಳಗದವರಿಗೂ, ಸ್ನೇಹಿತ ಬಳಗದವರಿಗೂ ಕಳಿಸಿಕೊಡುವುದು. ಈ ಚಿತ್ರಗಳು ಭಾರತದ ಚಿತ್ರಕಲಾವಿದರು ಬ್ರಿಟಿಷರಿಗಾಗಿ ಚಿತ್ರಿಸಿದವುಗಳು.
ಈ ರೀತಿಯಲ್ಲಿ ಮೊದಲಾಗಿ ಚಿತ್ರ ಬರೆಯಿಸಿದ್ದು “ಈಸ್ಟ್ ಇಂಡಿಯಾ ಟ್ರೇಡಿಂಗ್ ಕಂಪೆನಿ." ಆದ್ದರಿಂದ ಈ ಶೈಲಿಗೆ "ಕಂಪೆನಿ ಸ್ಕೂಲ್” ಎಂದು ಹೆಸರಾಯಿತು.
ಇದು ಭಾರತೀಯ ಮತ್ತು ಯುರೋಪಿಯನ್ ಚಿತ್ರಶೈಲಿಗಳ ಮಿಶ್ರಶೈಲಿ. ಆ ವರೆಗೆ ಪ್ರಚಲಿತವಿದ್ದ ಮೊಘಲ್ ಶೈಲಿಯನ್ನು ಬದಿಗೊತ್ತಿ, ಹೊಸ ಶೈಲಿಗೆ ಬ್ರಿಟಿಷ್ ಆಡಳಿತಗಾರರು ಪ್ರೋತ್ಸಾಹ ನೀಡಿದರು. ಬ್ರಿಟಿಷರು ಭಾರತದಲ್ಲಿ ಸಸ್ಯೋದ್ಯಾನಗಳನ್ನು ಬೆಳೆಸಿದರು ಮತ್ತು ಪ್ರಾಣಿಗಳನ್ನು ಬಂಧನದಲ್ಲಿಟ್ಟು ಸಾಕುತ್ತಿದ್ದರು; ಇದರ ಒಂದು ಉದ್ದೇಶ ಅವುಗಳನ್ನು ಅಧ್ಯಯನ ಮಾಡಿ, ಚಿತ್ರಗಳಲ್ಲಿ ದಾಖಲಿಸುವುದು.
ಚಿತ್ರ ಕೃಪೆ: ಗೀತಿಕಾ ಜೈನ್ ಅವರ “ಬರ್ಡ್ಸ್ ಆಂಡ್ ಆನಿಮಲ್ಸ್ ಇನ್ ಇಂಡಿಯನ್ ಆರ್ಟ್” ಪುಸ್ತಕ
ಮುರಾಲ್ ಚಿತ್ರಕಲೆ
ಇವು ಗೋಡೆಚಿತ್ರಗಳು. ಈ ಚಿತ್ರಕಲೆಯ ಮೂಲ ರಾಜಸ್ಥಾನದ ಷೆಖಾವತಿ ಪ್ರದೇಶ. ರಜಪೂತ ದಳಪತಿ ರಾವ್ ಷೇಖಾನಿಂದಾಗಿ ಅಲ್ಲಿಗೆ ಈ ಹೆಸರು. ಅಲ್ಲಿನ ಶ್ರೀಮಂತ ಸಮುದಾಯದ ಜನರು ಅಲಂಕಾರಕ್ಕಾಗಿ ತಮ್ಮ ಮನೆಗಳ ಗೋಡೆಗಳಲ್ಲಿ ಚಿತ್ರ ಬರೆಸಲು ಶುರು ಮಾಡಿದರು. ಇದು ಹಲವಾರು ಪಟ್ಟಣಗಳಲ್ಲಿ ಈ ಚಿತ್ರ ರಚನೆಗೆ ನಾಂದಿ.
ಗೋಡೆಗಳು, ಚಾವಣಿಗಳು, ಕಂಬಗಳು ಮತ್ತು ಕಿಟಕಿಗಳ ಕಮಾನುಗಳಲ್ಲಿಯೂ ಕಲಾಕಾರರು ಚಿತ್ರ ಬಿಡಿಸಿದರು. ಹೂಗಳ ವಿನ್ಯಾಸ, ಪ್ರಾಣಿಗಳು, ಪಕ್ಷಿಗಳು, ಧಾರ್ಮಿಕ ಸಂಗತಿಗಳು ಮತ್ತು ಮಹಾಕಾವ್ಯಗಳ ದೃಶ್ಯಗಳು - ಇವನ್ನು ಚಿತ್ರಿಸಿದರು. ಆರಂಭದಲ್ಲಿ ಕಲಾಕಾರರು ಸ್ಥಳೀಯ ಬಣ್ಣಗಳನ್ನೇ ಬಳಸಿದರು. ಕ್ರಮೇಣ ಕೆಂಪು, ನೀಲಿ ಇಂತಹ ಬೆಳಗುವ ಕೃತಕ ಬಣ್ಣಗಳಿಂದ ಚಿತ್ರಿಸಿದರು.
ಚಿತ್ರ ಕೃಪೆ: ಗೀತಿಕಾ ಜೈನ್ ಅವರ “ಬರ್ಡ್ಸ್ ಆಂಡ್ ಆನಿಮಲ್ಸ್ ಇನ್ ಇಂಡಿಯನ್ ಆರ್ಟ್” ಪುಸ್ತಕ
