1)ಎಪ್ರಿಲ್ 20ರ ನಂತರದ ಅಮವಾಸ್ಯೆಯ ಹಿಂದೆ-ಮುಂದೆ, “ಮಿ" ತಿಥಿ" ಹೊರತು ಪಡಿಸಿ, ಶನಿವಾರ ಅಥವಾ ಬುಧವಾರ ಈ ಕೆಳಗಿನ ತರಕಾರಿ ಬೀಜ ಬಿತ್ತಬೇಕು: ("ಮಿ" ತಿಥಿ ಅಂದರೆ ನವಮಿ, ದಶಮಿ, ಸಪ್ತಮಿ, ಅಷ್ಟಮಿ ಇತ್ಯಾದಿ)
ಸೋರೆಕಾಯಿ, ಪಡುವಲಕಾಯಿ, ದಾರಳೆ, ಋಷಿಕೇಶ ದಾರಳೆ, ಹಾಗಲಕಾಯಿ, ಅಲಸಂಡೆ, ಕುಂಬಳಕಾಯಿ, ಚೀನಿಕಾಯಿ
ಈ ಬೀಜಗಳನ್ನು ಗೊಬ್ಬರ ಹಾಕಿ ಹದ ಮಾಡಿದ ಮಣ್ಣಿನ ಏರುಮಡಿಗಳಲ್ಲಿ ಎರಡರಿಂದ ಮೂರಿಂಚು ಆಳದಲ್ಲಿ ಬಿತ್ತಬೇಕು. ಬಿತ್ತಿದ ನಂತರ, ಬೀಜಗಳಿಗೆ ನೀರು ಹಾಕಲೇ ಬಾರದು. ಮಳೆ ಬಂದು, ಸ್ವಾಭಾವಿಕವಾಗಿ ಬೀಜ ಮೊಳೆಯಬೇಕು.
2) ಮೇ ಕೊನೆಯ ಅಮವಾಸ್ಯೆಯ ಅಕ್ಕ-ಪಕ್ಕ, “ಮಿ" ತಿಥಿ ಹೊರತು ಪಡಿಸಿ, ಶನಿವಾರ ಅಥವಾ ಬುಧವಾರ ಬೆಂಡೆ ಬೀಜ ಬಿತ್ತಬೇಕು.
3)ಮಳೆಗಾಲ ಶುರುವಾದ ಕೂಡಲೇ ಬೇಸಿಗೆಯಲ್ಲಿ ಬೆಳೆಸಿದ್ದ ಬದನೆ ಗಿಡಗಳ ಗೆಲ್ಲುಗಳನ್ನು ಸವರಿ, ಸಾಲು ಬಿಡಿಸಿ, ಗೊಬ್ಬರ ಹಾಕಿದರೆ, ಫಸಲು ಸಮೃದ್ಧ.
4)ಜೂನ್ ಕೊನೆ ವಾರ/ ಜುಲಾಯಿ ಮೊದಲ ವಾರದ ಅಮವಾಸ್ಯೆ ದಿನ (ಆರ್ಧ್ರಾ ನಕ್ಷತ್ರ) ಮುಳ್ಳುಸೌತೆ ಬೀಜ ಬಿತ್ತಬೇಕು.
5)ಜುಲಾಯಿ ಕೊನೆಯ ವಾರ ಅಥವಾ ಆಗಸ್ಟ್ ಮೊದಲ ವಾರದ ಆಟಿ-ಅಮವಾಸ್ಯೆಯ ಆಸುಪಾಸಿನಲ್ಲಿ ಸೌತೆ, ಕುಂಬಳಕಾಯಿ ಮತ್ತು ಚೀನಿಕಾಯಿ ಬೀಜ ಬಿತ್ತಬೇಕು. ಬಸಳೆಯನ್ನೂ ಆಗಲೇ ನೆಡಬೇಕು.
6)ಈ ಮೇಲೆ (5)ರಲ್ಲಿ ತಿಳಿಸಿದ ದಿನವೇ ಬದನೆ ಬೀಜ ಬಿತ್ತಬೇಕು. ಇದು ಅಕ್ಟೋಬರಿನಲ್ಲಿ ಬದನೆ ಸಸಿಗಳನ್ನು ನೆಡುವುದಕ್ಕಾಗಿ ಪೂರ್ವ ತಯಾರಿ.
7)ಆಗಸ್ಟ್ ತಿಂಗಳಿನ ಕೊನೆಯಲ್ಲಿ ತೊಂಡೆ ಬಳ್ಳಿ ನೆಡಬೇಕು ಮತ್ತು ಕಳೆದ ವರುಷ ನೆಟ್ಟು ಬೆಳೆಸಿದ ಬಳ್ಳಿ ಕತ್ತರಿಸಬೇಕು.
8)ಅಕ್ಟೋಬರ್ 20ರಿಂದ 30 ಅವಧಿಯಲ್ಲಿ ಬದನೆ ಸಸಿಗಳನ್ನು ನೆಡಬೇಕು.
9)ನವಂಬರ್ ಕೊನೆಯ ವಾರದಲ್ಲಿ ಬೆಂಡೆ ಬೀಜ ಬಿತ್ತಬೇಕು.
10)ನವಂಬರ್ ಕೊನೆ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ “ಆಟಿಸೌತೆ" ಬೆಳೆಸಿದ ಮಣ್ಣಿನ ಸಾಲುಗಳನ್ನು ಬಿಡಿಸಿ, ಮಣ್ಣು ಕೊಚ್ಚಿ, ಹರಿವೆ ಬೀಜ ಬಿತ್ತಬೇಕು.
11)ಡಿಸೆಂಬರ್ ಕೊನೆಯ ವಾರದಲ್ಲಿ ಅಲಸಂಡೆ, ಪಡುವಲ, ಹಾಗಲ, ಹೀರೆ ಸಾಲು ಕಣಿ ಮಾಡಿ ಬೀಜ ಬಿತ್ತಬೇಕು.
12)ಫೆಬ್ರವರಿ 25ರಿಂದ ಮಾರ್ಚ್ 30 ಅವಧಿಯಲ್ಲಿ ಸೌತೆ, ಮುಳ್ಳುಸೌತೆ, ಕುಂಬಳಕಾಯಿ, ಸೋರೆಕಾಯಿ, ಚೀನಿಕಾಯಿ, ಬೆಂಡೆ ಬೀಜ ಬಿತ್ತಬೇಕು.
13)ಎಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ಅಲಸಂಡೆ, ಸೌತೆ, ಮುಳ್ಳುಸೌತೆ, ಬೆಂಡೆ ಬೀಜ ಬಿತ್ತಬೇಕು.
ಗಮನಿಸಿ: ಯಾವುದೇ ಬೀಜ ಬಿತ್ತನೆಗೆ ಬುಧವಾರ ಮತ್ತು ಶನಿವಾರ ಅತ್ಯಂತ ಯೋಗ್ಯ ದಿನಗಳು.
ಫೋಟೋ 1: ಶಿವಪ್ರಸಾದ್ ವರ್ಮುಡಿಯವರ ಕೈಯಲ್ಲಿ ಅವರು ಬೆಳೆದ ಮೂಲಂಗಿ
ಫೋಟೋ 2: ಆ ಮೂಲಂಗಿಯ ತೂಕ (ತೂಕದ ಯಂತ್ರ ತೋರಿಸುತ್ತಿದೆ) 800 ಗ್ರಾಮ್


